Dharwad

ಪೇಡಾ ನಗರಿ ಧಾರವಾಡದಲ್ಲಿ ರಂಗೇರಿದ ಬಣ್ಣದೋಕುಳಿ….. ನಗರದ ಕೆಸಿಡಿ ರಸ್ತೆ ಎಸ್‌ಬಿ‌ಐ, ಶಿವಾಜಿ ವೃತಗಳು ಸೇರಿ ಸುಭಾಷ್ ರಸ್ತೆಯಲ್ಲಿ ರೇನ್ ಡ್ಯಾನ್ಸ್ ಮಾಡಿ ಸಂಭ್ರಮ

Share

ಯುವ ಸಮುದಾಯದ ಹಬ್ಬವೆಂದೇ ಖ್ಯಾತಿ ಹೊಂದಿರುವ ರಂಗಪಂಚಮಿ ಹಬ್ಬವು ಪೇಡಾ ನಗರಿ ಧಾರವಾಡದಲ್ಲಿ ರಂಗೇರಿದೆ. ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಕಾಮಣ್ಣ ದೇವರ ದಹನವು ಇಂದು ಮುಂಜಾನೆ ನಗರಗಳಲ್ಲಿ ನಡೆದಿದ್ದು, ನಂತರ ನಡೆದ ಬಣ್ಣದೋಕುಳಿಯಲ್ಲಿ ಜನತೆ ಬಣ್ಣದಲ್ಲಿ ಮಿಂದೆದಿದ್ದಾರೆ. ಇನ್ನೂ ಜನಪ್ರತಿನಿಗಳು ಆಯೋಜನೆ ಮಾಡಿದ ರೇನ್ ಡ್ಯಾನ್ಸ್‌ನಲ್ಲಿ ಯುವಕ ಯುವತಿಯರು ಸಖತ್ ಸ್ಟೆಪ್ ಹಾಕಿ ಎಂಜಾಯ ಮಾಡಿದರು.

ಹೌದು ಧಾರವಾಡದ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಂದು ರಂಗಪಂಚಮಿ ಹಬ್ಬದ ಶ್ರೀ ಕಾಮದೆರವರ ದಹನ ಕಾರ್ಯ ನಡೆಯಿತು. ಗುರುವಾರ ಮಧ್ಯರಾತ್ರಿ ನಗರಗಳ ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ಕಾಮಣ್ಣ ಮೂರ್ತಿಯನ್ನು ಇಂದು ಮುಂಜಾನೆ ದಹನ ಮಾಡಲಾಯಿತು. ನಂತರ ನಡೆದ ಬಣ್ಣದೋಕುಳಿ ನಡೆದಿದ್ದು, ಜನರ ಪರಸ್ಪರ ಬಣ್ಣ ಹಚ್ಚುವ ಮೂಲಕ ಕಾಮಣ್ಣ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಸಾಮನ್ಯವಾಗಿದವು. ಇನ್ನೂ ನಗರದ ಕೆಸಿಡಿ ರಸ್ತೆಯ ಎಸ್‌ಬಿಐ ವೃತದಲ್ಲಿ ಶಾಸಕ‌ಅರವಿಂದ ಬೆಲ್ಲದ, ಶಿವಾಜಿ ವೃತದಲ್ಲಿ ಶಾಸಕ ವಿನಯ ಕುಲಕರ್ಣಿಯವರ ವತಿಯಿಂದ ರೇನ್ ಡ್ಯಾನ್ಸ್ ಆಯೋಜನೆಯು ರಂಗಪಂಚಮಿ ರಂಗು ಹೆಚ್ಚಿಸಿತ್ತು.

ರೇನ ಡ್ಯಾನ್ಸ್‌ನಲ್ಲಿ ನಗರದ ಯುವ ಸಮುದಾಯ ಡಿಜ್ಜೆ ಹಾಡಿಗೆ ಸಖತ್ ಸ್ಟೆಫ ಹಾಕುವ ಮೂಲಕ ಸಂಭ್ರಮಿಸಿದರು. ಇನ್ನೂ ಶಿವಾಜಿ ವೃತದಲ್ಲಿ ಶಾಸಕ ವಿನಯ ಕುಲಕರ್ಣಿ ಪತ್ನಿ ಶೀವಲೀಲಾ ಹಾಗೂ ಪುತ್ರಿ ಭಾಗಿಯಾದ್ದರೆ, ಎಸಬಿಐ ವೃತದಲ್ಲಿ ಶಾಸಕ‌ ಅರವಿಂದ ಬೆಲ್ಲದ ಭಾಗಿಯಾಗಿ ಬಣ್ಣದೋಕುಳಿಯ ರಂಗು ಹೆಚ್ಚಿಸಿದರು.

Tags:

error: Content is protected !!