ಕಸಕ್ಕೆ ಹಚ್ಚಿದ ಬೆಂಕಿಯು ಪಕ್ಕದಲ್ಲಿ ಕೆಟ್ಟು ನಿಂತಿದ್ದ ಅಂಬ್ಯುಲೆನ್ಸ್‌ಗೆಯು ತಗುಲಿ ಹೊತ್ತಿ ಉರಿದಿರುವ ಘಟನೆ ಧಾರವಾಡ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಧಾರವಾಡ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಈ ದುರ್ಘಟನೆ ನಡೆದಿದೆ. ಮೊದಲು ಕಸಕ್ಕೆ ಬೆಂಕಿ ಹಚ್ಚಲಾಗಿದೆ, ಕಸದ ರಾಶಿಯ ಬಳಿಯೇ ಅದರ ಕೆಟ್ಟಿದ್ದ ಅಂಬ್ಯುಲೆನ್ಸ್ ಒಂದನ್ನು ನಿಲ್ಲಿಸಲಾಗಿತ್ತು. ಕಸಕ್ಕೆ ಬಿದ್ದಿದ್ದ ಬೆಂಕಿ ಆ ಅಂಬ್ಯುಲೆನ್ಸ್‌ಗೂ ತಗುಲಿದೆ. ಇದರಿಂದ ಅಂಬ್ಯುಲೆನ್ಸ್ ಧಗಧಗನೇ ಹೊತ್ತಿ ಉರಿದಿದೆ. ಆ ಅಂಬ್ಯುಲೆನ್ಸ್ ಪಕ್ಕವೇ ಬಿಲ್ಡಿಂಗ್ ಕೂಡ ಇದ್ದು, ಅದೃಷ್ಟವಶಾತ್ ಬೆಂಕಿಯ ಕಟ್ಟಡದ ಒಳಗಡೆ ಚಾಚಿಲ್ಲ ಅನ್ಮುವುದು ಸಮಾಧನಕರ ಸಂಗತಿಯಾಗಿದೆ. ಈ ಬೆಂಕಿ ಕಂಡು ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರು ಗಾಬರಿಗೊಂಡಿದ್ದರು. ಕೆಲವರು ಬೆಂಕಿ ನಂದಿಸಲು ಮುಂದಾದರೂ ಬೆಂಕಿ ನಿಯಂತ್ರಣಕ್ಕೆ ಬರದಿದ್ದರಿಂದ ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಯಿಸಿ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ.