Belagavi

ಅನರ್ಹಗೊಂಡ ಬೆಳಗಾವಿಯ ಇಬ್ಬರೂ ನಗರಸೇವಕರಿಗೆ ಹೈಕೋರ್ಟ್’ನಿಂದ ಬಿಗ್ ರಿಲೀಫ್

Share

ಖಾವು ಕಟ್ಟಾದಲ್ಲಿ ಅಕ್ರಮ ಮಳಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಇಬ್ಬರು ನಗರಸೇವಕರನ್ನು ಅನರ್ಹಗೊಳಿಸಿದ್ದ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದ್ದು, ನಗರಸೇವಕರಿಗೆ ಬೀಗ್ ರಿಲೀಫ್ ಸಿಕ್ಕಂತಾಗಿದೆ.

ಖಾವುಕಟ್ಟಾದಲ್ಲಿ ಅಕ್ರಮವಾಗಿ ಮಳಿಗೆಗಳನ್ನು ಪಡೆದ ಹಿನ್ನೆಲೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರಾದ ಜಯಂತ್ ಜಾಧವ್ ಮತ್ತು ಮಂಗೇಶ ಪವಾರ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದರು. ಇದರ ವಿರುದ್ಧ ನಗರಸೇವಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಯು.ಡಿ. ಸೆಕ್ರೆಟರಿ ಅವರು ಇನ್ನೊಮ್ಮೇ ವಿಚಾರಣೆ ಮಾಡಬೇಕೆಂದು ಆದೇಶಿಸಿತ್ತು. ಕಳೆದ ದಿನವಷ್ಟೇ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನಡೆಸಿದ ಮೇಲ್ಮನವಿ ಪ್ರಾಧಿಕಾರವು ಈ ಇಬ್ಬರೂ ಸದಸ್ಯರ ಮನವಿಯನ್ನು ತಿರಸ್ಕರಿಸಿತ್ತು.

ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದ್ದು, ಇಬ್ಬರು ನಗರಸೇವಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅಲ್ಲದೇ, ಮಹಾಪೌರ ಚುನಾವಣೆಯಲ್ಲಿಯೂ ಭಾಗವಹಿಸಲು ಅವಕಾಶ ದೊರೆತಿದೆ. ಈ ಕುರಿತು ಶಾಸಕ ಅಭಯ್ ಪಾಟೀಲ್ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ನಗರಸೇವಕರ ಪರ ಪುನಂ ಪಾಟೀಲ್ ಮತ್ತು ಎ.ವೈ ಪಾಟೀಲ್ ಅವರು ವಕಾಲತ್ತನ್ನು ವಹಿಸಿದ್ದರು.

Tags:

error: Content is protected !!