Belagavi

ಶಿಕ್ಷಕರ ವ್ಯಕ್ತಿತ್ವ ವಿಕಸನವಾದರೇ…ಮಾತ್ರ ಉತ್ತಮ ವಿದ್ಯಾರ್ಥಿ.ಉತ್ತಮ ಸಮಾಜ ನಿರ್ಮಾಣ ಸಾಧ್ಯ

Share

ಶಿಕ್ಷಕರು ನಿರ್ಮಿಸಿದಂತೆ ವಿದ್ಯಾರ್ಥಿಗಳು ನಿರ್ಮಾಣಗೊಂಡು, ಸಮಾಜವನ್ನು ನಿರ್ಮಿಸುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ಒತ್ತಡದ ಜೀವನ ನಡೆಸುವ ಶಿಕ್ಷಕರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಜಿಲ್ಲಾ ಖಜಾನೆ ಅಧಿಕಾರಿ ವೀಣಾ ಬಿದರಿ ಹೇಳಿದರು.

ಶುಕ್ರವಾರದಂದು ಬೆಳಗಾವಿಯ ಕುಮಾರಗಂಧರ್ವ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಳಗಾವಿ ಜಿಲ್ಲಾ ಮತ್ತು ನಗರ ಘಟಕದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಸಬಲೀಕರಣ ಕಾರ್ಯಾಗಾರ ಹಾಗೂ ರಾಣಿ ಚೆನ್ನಮ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಉಪಮಹಾಪೌರರಾದ ವಾಣಿ ಜೋಷಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೀಲಾವತಿ ಹಿರೇಮಠ, ಜಂಟಿ ನಿರ್ದೇಶಕರಾದ ವಿನಯಕುಮಾರ, ಬಿಇಓ ರವಿ ಭಜಂತ್ರಿ, ಜಯಕುಮಾರ್ ಹೆಬಳಿ, ರಮೇಶ್ ಗೋಣಿ, ಬಾಬು ಸೋಗಲನ್ನವರ, ಕೃಷ್ಣಾ ರಾಚನ್ನವರ ಇನ್ನುಳಿದವರು ಉಪಸ್ಥಿತರಿದ್ದರು.

ಶಿಕ್ಷಕರು ನಿರ್ಮಿಸಿದಂತೆ ವಿದ್ಯಾರ್ಥಿಗಳು ನಿರ್ಮಾಣಗೊಂಡು, ಸಮಾಜವನ್ನು ನಿರ್ಮಿಸುತ್ತಾರೆ. ವಿದ್ಯಾರ್ಥಿಗಳು ಮನೆಗಿಂತ ಹೆಚ್ಚು ಸಮಯವನ್ನು ಶಿಕ್ಷಕರೊಂದಿಗೆ ಕಳೆಯುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಕರಿಸುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ಒತ್ತಡದ ಜೀವನ ನಡೆಸುವ ಶಿಕ್ಷಕರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದರು.

ಸ್ತ್ರೀ ಜೀವನದಲ್ಲಿ ಏಕಾಂಗಿಯಾದರೂ, ಛಲದಿಂದ ಸಾಧಿಸಿ ತೋರಿಸಿದ ಹಲವಾರು ಉದಾಹರಣೆಗಳಿವೆ. ಸಮಾಜಕ್ಕೆ ಮಹಿಳೆಯರು ನೀಡದ ಕೊಡುಗೆ, ಜೀವನದಲ್ಲಿ ಮಹಿಳೆಯ ಪಾತ್ರ ಎಷ್ಟು ಮಹತ್ತರ ಎಂದು ಬಿಇಓ ರವಿ ಭಜಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಆರ್.ಟಿ. ಬಳಿಗಾರ, ರಮೇಶ್ ಅಣ್ಣಿಗೇರಿ, ರೇಖಾ ಅಂಗಡಿ, ಅಂಜನಾ ಮುರಗೋಡ, ಶೈಲಾ ಹಂಪಿಹೊಳಿ, ರುದ್ರಪ್ಪ ಹೈಬತ್ತಿ, ಸುಮಾ ದೊಡಮನಿ, ಹೇಮಾ ಅಂಗಡಿ, ಚಂದ್ರಶೇಖರ ಕೋಲಕಾರ, ಅಕ್ಕಮಹಾದೇವಿ ಹುಲಗಬಾಳಿ ಸೇರಿದಂತೆ ಶಿಕ್ಷಕರು ಹಾಗೂ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!