ಬೆಳಗಾವಿಯಲ್ಲಿ ಈಗ ಮತ್ತೊಂದು ರೇಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆದರೇ, ಬೆಳಗಾವಿಯ ಸೆಕೆಂಡ್ ಗೇಟ್’ನ ರಹಿವಾಸಿಗಳು ಇಕ್ಕಟ್ಟಿನ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಿದರೇ, ಸಹಾಯಕ್ಕಿಂತ ಸಂಕಷ್ಟ ಹೆಚ್ಚಾಗಿಲಿದೆ ಎನ್ನುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ.

ಹೌದು, ಬೆಳಗಾವಿ ಸೆಕೆಂಡ್ ರೇಲ್ವೆ ಗೇಟ್’ನಲ್ಲಿ ಮೇಲ್ಸೇತುವೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೇ, ಇಲ್ಲಿನ ರಹಿವಾಸಿಗಳು ಮೇಲ್ಸೇತುವೆ ನಿರ್ಮಾಣದಿಂದ ತೊಂದರೆಯುಂಟಾಗಬಹುದೆಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸೆಕೆಂಡ್ ರೇಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸಮರ್ಪಕ ರಸ್ತೆಯಿಲ್ಲ. ಒಂದು ವೇಳೆ ಮೇಲ್ಸೇತುವೆ ನಿರ್ಮಿಸಿದರೇ, ಇಲ್ಲಿರುವ ಶಾಲಾ ಕಾಲೇಜಿನ ಮಕ್ಕಳಿಗೆ ಅಡ್ಡಾಡಲು ತೊಂದರೆಯಾಗಲಿದೆ. ಸ್ಥಳಕ್ಕೆ ಬಂದು ಭೇಟಿ ನೀಡಿ, ಪರಿಶೀಲಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೇಲ್ಸೇತುವೆ ನಿರ್ಮಿಸುವ ನಿರ್ಣಯ ಕೈಗೊಳ್ಳಬೇಕೆಂಬುದು ಇಲ್ಲಿನ ಜನರ ಆಗ್ರಹವಾಗಿದೆ.
ಇನ್ನು ಇಲ್ಲಿ ಮೇಲ್ಸೇತುವೆ ನಿರ್ಮಿಸುವುದು ಅವಶ್ಯಕ. ಆದರೇ ಸದ್ಯ ಥರ್ಡ್ ಗೇಟ್ ಕಾಮಗಾರಿ ಸ್ಥಗಿತಗೊಂಡಿದೆ. ಇನ್ನೊಂದೆಡೆ ಇಲ್ಲಿ ಸರಾಗವಾಗಿ ವಾಹನ ಸಂಚಾರವಾಗುತ್ತಿದ್ದು, ಮೇಲೇತ್ಸುವೆ ನಿರ್ಮಾಣದಿಂದ ಇದಕ್ಕೆ ಕೊಕ್ಕೆ ಬೀಳಲಿದೆ. ಅಲ್ಲದೇ ಜನರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ.
ಇಲ್ಲಿ 40-50 ಅಡಿಯ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವುದು ಕಷ್ಟಕರ. ಇಕ್ಕಟ್ಟಿನ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಿದರೇ, ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆಯಿದೆ. ಪಕ್ಕದ ಬೀದಿಗೆ ತೆರಳಲು ಕೂಡ ಸುತ್ತುವರಿದ ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಇನ್ನು ಇಲ್ಲಿ ಮೇಲ್ಸೇತುವೆ ನಿರ್ಮಿಸುವುದಾದರೇ, ಇಲ್ಲಿರುವ ಜನವಸತಿಗೆ ಅಡ್ಡಾಡಲೂ ಸರ್ವೀಸ್ ರಸ್ತೆ ನಿರ್ಮಿಸಲೇಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಹಿತದಲ್ಲಿ ರಸ್ತೆಯನ್ನು ನಿರ್ಮಿಸಬೇಕು. ಇಲ್ಲಿನ ಜನರಿಗೆ ಶಾಲಾ-ಕಾಲೇಜಿನ ಮಕ್ಕಳಿಗೆ ಅನುಕೂಲವಾಗುವ ನಿರ್ಣಯವನ್ನು ಸರ್ಕಾರ ತೆಗೆದುಕೊಳ್ಳಬೇಕೆಂಬುದು ಇಲ್ಲಿನ ಜನರ ಆಗ್ರಹವಾಗಿದೆ.