ಜಾಗದ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಬೆಳಗಾವಿ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ನಡೆದಿದೆ

ಗ್ರಾಮದ ಮಾರುತಿ ವಣ್ಣೂರೆ ಹಾಗೂ ಪರಸಪ್ಪ ಹೋಳಿಕಾರ ಕುಟುಂಬದ ಮಧ್ಯ ಜಾಗಕ್ಕಾಗಿ ವಿವಾದ ನಡೆದು ಪರಸ್ಪರ ಕಲ್ಲುತೂರಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಹಲ್ಲೆಗೊಳಗಾದ ಮಹಿಳೆಯ ಸಹೋದರಿ ನಾನು ಜಗಳ ಬಿಡಿಸಲು ಹೋಗಿದ್ದೆ ಅವರು ನೂರಾರು ಸಂಖ್ಯೆಯಲ್ಲಿದ್ದರು ನಮ್ಮನ್ನು ಕೆಳಗೆ ಹಾಕಿ ಕಾಲಿನಿಂದ ತುಳಜಾಡಿದರು ಕಲ್ಲುಗಳನ್ನು ತೂರಿದರು ಮಾರಕಾಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದ ರೆಂದು ಹೇಳಿದರು
ಕುಡುಗೋಲ್ ನಿಂದ ನಿಂಗವ್ವ ಹೊನ್ನೂರ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಕಾಕತಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಸಪ್ಪ, ಬರಮಪ್ಪ,ಅಪ್ಪಣ್ಣ ಹೋಳಿಕಾರ ಸಹೋದರರಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು ಮಾರುತಿ ವಣ್ಣೂರೆ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ