Belagavi

ಬೆಳಗಾವಿ ಮಹಾನಗರ ಪ್ರವೇಶದ ರಸ್ತೆಗಳು 15 ದಿನದೊಳಗೆ ಕಸದಿಂದ ಮುಕ್ತವಾಗಬೇಕು…

Share

ಬೆಳಗಾವಿ ಮಹಾನಗರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಪಕ್ಕದಲ್ಲಿ ತ್ಯಾಜ್ಯವನ್ನು ಎಸೆಯದೇ ಒಣ ಕಸ ಹಸಿ ಕಸ ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಬೇಕು. 15 ದಿನದೊಳಗೆ ರಸ್ತೆಗಳು ಕಸದಿಂದ ಮುಕ್ತವಾಗಬೇಕೆಂದು ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಖಡಕ್ ಎಚ್ಚರಿಕೆಯನ್ನು ನೀಡಲಾಯಿತು.

ಇಂದು ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮಂಗೇಶ್ ಪವಾರ್ ಮತ್ತು ಉಪಮಹಾಪೌರರಾದ ವಾಣಿ ವಿಲಾಸ ಜೋಷಿ ಅವರ ಅಧ್ಯಕ್ಷತೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಹತ್ವದ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ ಬಿ. ಅವರು ಬೆಳಗಾವಿ ನಗರವು ವಿವಿಧ ರಾಜ್ಯಗಳ ಸಂಪರ್ಕದ ಕೊಂಡಿಯಾಗಿದೆ. ಆದರೇ ಇಲ್ಲಿಗೆ ಆಗಮಿಸುವವರನ್ನು ತ್ಯಾಜ್ಯದಿಂದ ಬರಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಗಳಾಗಲಿ ಜನರಾಗಲಿ ಕಸವನ್ನು ರಸ್ತೆಯ ಪಕ್ಕಕ್ಕೆ ಎಸೆಯದೇ ಯೋಗ್ಯವಾಗಿ ಒಣಕಸ ಹಸಿಕಸ ವಿಂಗಡೆ ಮಾಡಿ ವಿಲೇವಾರಿ ಘಟಕಕ್ಕೆ ನೀಡಬೇಕೆಂದರು.

ಈ ವೇಳೆ ಮಾತನಾಡಿದ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿನಿಂದ ತೊಂದರೆಯಾಗುತ್ತಿದೆ. ಚರಂಡಿಯಿಂದ ತೆಗೆಯಲಾದ ತ್ಯಾಜ್ಯವನ್ನು ಬೆನಕನಹಳ್ಳಿ ರಸ್ತೆಗೆ ಎಸೆಯುತ್ತಿರುವುದಾಗಿ ದೂರಿದರು.  ಸಾಂಬ್ರಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಗರ ಪ್ರದೇಶದಂತೆ ಗ್ರಾಮೀಣ ಭಾಗದಲ್ಲಿ ಒಣ ಕಸ- ಹಸಿ ಕಸ ವಿಂಗಡಣೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಇನ್ನು ತ್ಯಾಜ್ಯ ವಿಲೇವಾರಿಗೆ ಸಮಪರ್ಕ ಜಾಗೆಯನ್ನು ನೀಡಬೇಕೆಂದರು.

ಇನ್ನು ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ.ಬಿ ಅವರು ಒಣ ಕಸ ಮತ್ತು ಹಸಿ ಕಸ ವಿಂಗಡನೆ ಮಾಡಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಕಸವನ್ನು ದಾರಿಯಲ್ಲಿ ಎಸೆಯದೇ, ವಿಲೇವಾರಿ ಘಟಕಗಳಿಗೆ ನೀಡಲು ಮಹಾನಗರ ಪಾಲಿಕೆ ಮತ್ತು ಗ್ರಾಮ ಪಂಚಾಯಿತಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮಕೈಗೊಳ್ಳಲಾಗುವುದು . ಏಪ್ರೀಲ್ 20 ರಂದು ಈ ಕುರಿತು ಇನ್ನೊಮ್ಮೆ ಸಭೆಯನ್ನು ಕರೆಯಲಾಗುವುದು ಎಂದರು.

ಇನ್ನು, ಕೆಲ ಜನರು ಪ್ಲಾಸ್ಟಿಕಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಇದನ್ನ ತಿಂದು ದನಕರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಆದ್ದರಿಂದ ನಗರ ಪ್ರದೇಶವಲ್ಲದೇ ಬೇರೆಡೆ ಮೇಯಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.  ಸಭೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರಣದ ಅಧಿಕಾರಿಗಳು , ಜಾನುವಾರುಗಳ ಮಾಲೀಕರು, ಆಡಳಿತ ಪಕ್ಷದ ನಾಯಕರಾದ ಗಿರೀಶ್ ಧೋಂಗಡಿ, ಪರಿಸರ ಅಧಿಕಾರಿ ಹಣಮಂತ ಕಲಾದಗಿ, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಶೈಲ್ ಕಾಂಬಳೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.

Tags:

error: Content is protected !!