ನಟಿ ರನ್ಯಾ ರಾವ್ ಖಾತೆಗೆ 10 ಲಕ್ಷ ರೂಪಾಯಿ ಸಂದಾಯವಾಗಿದೆ ಎಂಬ ಸುದ್ದಿ ಸುಳ್ಳು ಎಂದು ಮುಧೋಳದ ಓಂಕಾರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಸ್ಪಷ್ಟನೆ ನೀಡಿದ್ದಾರೆ

ಬಾಗಲಕೋಟ ಜಿಲ್ಲೆ ಮುಧೋಳದ ಓಂಕಾರ್ ಸಹಕಾರಿ ಬ್ಯಾಂಕ್ ನಿಂದ ಏಪ್ರಿಲ್ 27 ಮತ್ತು 28-2022 ರಲ್ಲಿ ನಟಿ, ಉದ್ಯಮಿ ಇದೀಗ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ ರನ್ಯಾರಾವ್ ಅವರ ಬೆಂಗಳೂರು ಟ್ರಿನಿಟಿ ಸರ್ಕಲ್ ಶಾಖೆಯ ಕೆನರಾ ಬ್ಯಾಂಕ್ ಅಕೌಂಟ್ ಗೆ 10 ಲಕ್ಷ ರೂಪಾಯಿ ಸಂದಾಯವಾಗಿದೆ ಎಂದು ಹರಡಿರುವ ಸುದ್ದಿ ಸುಳ್ಳು ಎಂದು ಸೌಹಾರ್ದ ಸಹಕಾರಿಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವೆಂಕಟೇಶ ರಾಥೋಡ್ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ
ಈ ವ್ಯವಹಾರಕ್ಕೂ ನಮ್ಮ ಬ್ಯಾಂಕ ಗೂ ಯಾವುದೇ ಸಂಬಂಧವಿಲ್ಲ ಬ್ಯಾಂಕ್ ವ್ಯವಹಾರದ ಸ್ಟೇಟ್ಮೆಂಟ್ ಕಾಪಿಗಳಿವೆ ಯಾರು ಬೇಕಾದರೂ ಬಂದು ಪರಿಶೀಲಿಸಬಹುದೆಂದು ಅವರು ಹೇಳಿದರು