Uncategorized

ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆಗೆ ಕೃಷ್ಣಾ ನದಿ ನೀರು…

Share

ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆಗೆ ಕೃಷ್ಣಾ ನದಿ ನೀರು ಹರಿಸದಂತೆ ಆಗ್ರಹಿಸಿದ ಇಂದು ಚಿಕ್ಕಪಡಸಲಗಿ ಗ್ರಾಮದ ಬಳಿ ಧಾರವಾಡ- ವಿಜಯಪುರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಚಿಕ್ಕಪಡಸಲಗಿ ಗ್ರಾಮದ ಬಳಿ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಬಳಿ ಧಾರವಾಡ- ವಿಜಯಪುರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನೆಯನ್ನು ತಡೆಯಲು ಮುಂದಾದಾಗ ರೈತರು- ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಹೆದ್ದಾರಿ ಬಂದ್ ಮಾಡಿದ್ದರಿಂದಾಗಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಆಗ್ರಹಿಸಿದರು. ಕಳೆದ 20 ವರ್ಷಗಳಿಂದ ನಮಗೆ ಅನ್ಯಾಯ ಆಗ್ತಿದೆ. ನೀರು ಹೆಚ್ಚಿದ್ದಾಗ ಬೇರೆ ಜಿಲ್ಲೆಗೆ ನೀರು ಹರಿಸಲಿ, ನಮಗೆ ನೀರು ಕಡಿಮೆ ಇದ್ದಾಗ ನಮ್ಮ ನೀರು ಬೇರೆ ಜಿಲ್ಲೆಗೆ ಹೋಗಬಾರದು ಎಂದರು.

ಈ ಸಂದರ್ಭದಲ್ಲಿ ನೂರಾರು ರೈತರು ಭಾಗಿಯಾಗಿದ್ಧರು.

Tags:

error: Content is protected !!