ನವದೆಹಲಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಎಕ್ಸ್ಪೋ 2025ರಲ್ಲಿ 600 ಪ್ರಶಸ್ತಿ ನಾಮನಿರ್ದೇಶನಗಳಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ನಿಯಮಿತ ಕಂಪನಿಗೆ” ವರ್ಷದ ಅತ್ಯುತ್ತಮ ನಗರ ನಾಯಕ ಪ್ರಶಸ್ತಿ “ದೊರಕಿದೆ

ರಷ್ಯಾ ಮೊದಲ ಬಾರಿಗೆ ಭಾಗವಹಿಸುತ್ತಿರುವ ಮತ್ತು ಶಿಕ್ಷಣ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ,ಹಣಕಾಸು ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳ ಜಂಟಿ ಆಯೋಜಕತ್ವದಲ್ಲಿ ನವ ದೆಹಲಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಎಕ್ಸ್ಪೋ 2025 ರಲ್ಲಿ 600 ಪ್ರಶಸ್ತಿ ನಾಮನಿರ್ದೇಶನಗಳಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ನಿಯಮಿತಕ್ಕೆ ಪ್ರತಿಷ್ಠಿತ “ವರ್ಷದ ಅತ್ಯುತ್ತಮ ನಗರ ನಾಯಕ” ಪ್ರಶಸ್ತಿ ಲಭಿಸಿದೆ. ಈ ಮನ್ನಣೆಯು ಬೆಳಗಾವಿಯ 21 ಪುರಸ್ಕಾರಗಳ ದೀರ್ಘ ಪಟ್ಟಿಗೆ ಸೇರ್ಪಡೆಯಾಗಿದೆ, ಅವುಗಳಲ್ಲಿ ವಿಶ್ವಸಂಸ್ಥೆಯ ಪ್ರಶಸ್ತಿ, ಅತ್ಯುತ್ತಮ ಆಡಳಿತ ಪ್ರಶಸ್ತಿ, ನಾವೀನ್ಯತೆಗಾಗಿ ಅತ್ಯುತ್ತಮ ಪ್ರಶಸ್ತಿ,ಎಂಟರ್‌ಪ್ರೈಸ್ AI ಮತ್ತು ಬಿಗ್ ಡೇಟಾದಲ್ಲಿ ಅತ್ಯುತ್ತಮ ಪ್ರಶಸ್ತಿ ಮತ್ತು ISAC 2022 ರ ಅತ್ಯುತ್ತಮ ದಕ್ಷಿಣ ವಲಯ ನಗರ ಪ್ರಶಸ್ತಿ. ಈ ಸಾಧನೆಗಳು ನಗರಾಭಿವೃದ್ಧಿಯ ಕಡೆಗೆ ಕರ್ನಾಟಕದ ಬದ್ಧತೆಯನ್ನು ಮತ್ತು ಸ್ಮಾರ್ಟ್ ನಗರ ಪರಿವರ್ತನೆ, ತಾಂತ್ರಿಕ ನಾವೀನ್ಯತೆ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಬೆಳಗಾವಿಯ ನಾಯಕತ್ವವನ್ನು ಪುನರುಚ್ಚರಿಸುತ್ತವೆ.