ಕಾಗವಾಡ: ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತ ಜೈನ ಸಮಾಜದ ಸಂಖ್ಯೆ ಸುಮಾರು ೨೦ ಲಕ್ಷವಿದೆ. ಸಮಾಜದ ಅಭಿವೃದ್ಧಿಗಾಗಿ ನಾನು ಕಠಿಬದ್ಧನಾಗಿದ್ದೇನೆ. ಈಗಾಗಲೇ ಸಮಾಜಕ್ಕೆ ಅನುದಾನ ನೀಡಲಾಗಿದೆ. ಈಗ ಜೈನ ಸಮಾಜದ ನಿಗಮ ಮಂಡಳ ಸ್ಥಾಪನೆ ಮಾಡಿ ಇದೇ ಬಜೆಟ್‌ನಲ್ಲಿ ಅನುದಾನ ನೀಡುವ ವ್ಯವಸ್ಥೆ ಮಾಡಲಿದ್ದೇನೆ.

ತಪ್ಪಿದ್ದರೆ ಬರುವ ಬಜೆಟ್‌ನಲ್ಲಿ ಯಾವುದೇ ಕಾಲಕ್ಕೆ ಸಮಾಜಕ್ಕೆ ಎಲ್ಲ ಸೌಕರ್ಯ ನೀಡಲು ನಾನು ಸಿದ್ಧನಿದ್ದೇನೆಯೆಂದು ಕರ್ನಾಟಕ ರಾಜ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದಖಾನ ಸಮಾಜ ಬಾಂಧವರಿಗೆ ಭರವಸೆ ನೀಡಿದರು. ಬುಧವಾರ ರಂದು ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ಕರ್ನಾಟಕ ಜೈನ ಸಮಾಜದ ಹಕ್ಕೊತ್ತಾಯ ಸಭೆಯು ಬೆಂಗಳೂರಿನ ಜೈನ ಅಸೋಸಿಯೇಷನ್ ಸಭಾ ಭವನದಲ್ಲಿ ಜರುಗಿತು. ಸಭೆಯಲ್ಲಿ ಜಮೀರ್ ಅಹ್ಮದಖಾನ ಮಾತನಾಡುತ್ತಿದ್ದರು.
ಅಥಣಿ ಶಾಸಕರು, ಮಾಜಿ ಡಿಸಿಎಂ ಲಕ್ಷö್ಮಣ ಸವದಿ ಮಾತನಾಡಿ, ಜೈನ ಸಮಾಜದ ಬೇಡಿಕೆಗಳಿಗೆ ಅಥವಾ ಸಮಸ್ಯೆಗಳಿಗೆ ಸ್ಪಂದಿಸಲು ಯಾರಾದರೂ ಪ್ರಯತ್ನಿಸಿದರೆ; ಅದು ರಾಷ್ಟçಸಂತ, ವರೂರ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು. ಅವರ ಸಮಾರಂಭದಲ್ಲಿ ನಾನು ಪಾಲ್ಗೊಂಡಾಗ ಸಮಾಜದ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದರು. ಆಗ ನಾನು ಸಮಾಜದ ಸಮಸ್ಯೆ ವಿಧಾನಮಂಡಳದಲ್ಲಿ ಪ್ರಶ್ನಿಸುತ್ತೇನೆಂದು ಹೇಳಿ ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಅದು ಈಗ ಫಲಶೃತಿ ಆಗುತ್ತಿದೆಯೆಂದರು.
ಜೈನ ಸಮಾಜದ ಮುಖಂಡರಾದ ರಾಜು ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಬೇಡಿಕೆ ಬಗ್ಗೆ ಸಚಿವ ಜಮೀರ ಅಹ್ಮದಖಾನ ಇವರಿಗೆ ಮನವರಿಕೆ ಮಾಡಿದರು. ಜೈನ ಸಮಾಜದ ಧ್ವನಿಯಾಗಿ ಲಕ್ಷö್ಮಣ ಸವದಿ ಇವರು ಅಧಿವೇಶನದಲ್ಲಿ ಪ್ರಶ್ನಿಸಿದ್ದರಿಂದ ನಮ್ಮ ಮೂರು ಬೇಡಿಕೆಗಳು ಈಡೆಯರಲಿವೆ. ಸ್ವತಂತ್ರö್ಯ ನಿಗಮದ ಸ್ಥಾಪನೆಗೊಳ್ಳುವ ಬೇಡಿಕೆ ಇದೇ ಬಜೆಟ್ ಅಧಿವೇಶನದಲ್ಲಿ ಮಂಜೂರುಗೊಳಿಸಿರಿಯೆAದು ಕೇಳಿಕೊಂಡರು.
ಸಮಾರಂಭದಲ್ಲಿ ಮಾಜಿ ಇಂಧನ ಖಾತೆ ಸಚಿವ ವೀರಕುಮಾರ ಪಾಟೀಲ, ಅಲ್ಪಸಂಖ್ಯಾಕ ಇಲಾಖೆ ಸಚಿವ ಡಿ. ಸುಧಾಕರ್, ಕರ್ನಾಟಕ ಜೈನ ಅಸೊಸಿಯೇಷನ್ ಅಧ್ಯಕ್ಷ ಜಿತೇಂದ್ರ ಕುಮಾರ್ ಎಸ್., ಉಪಾಧ್ಯಕ್ಷ ಶೀತಲ ಪಾಟೀಲ, ಕಾರ್ಯದರ್ಶಿ ಆಶಾ ಪ್ರಭು, ಸಹ ಕಾರ್ಯದರ್ಶಿ ಡಾ. ನೀರಜ ನಾಗೇಂದ್ರಕುಮಾರ್, ಪ್ರಶಾಂತ ವಿ., ಸಹ ಕೋಶಾಧಿಕಾರಿ ಧರಣೇಂದ್ರಯ್ಯ ಎ.ಸಿ., ಅಭಯ ಅವಲಕ್ಕಿ, ಸಂದೀಪ ಪಾಟೀಲ ಹಲಗಾ, ಸಂಜಯ ನಾಡಗೌಡ, ಅಮರ ದುರ್ಗಣ್ಣವರ, ದುಂಡಪ್ಪ ಅಸ್ಕಿ, ಶ್ರೀಕಾಂತ ಮಾಕಾಣಿ, ಬಾಬು ಅಕಿವಾಟೆ, ಮಹಾವೀರ ನಿಲಜಗಿ, ಸೇರಿದಂತೆ ಧರ್ಮಬಾಂಧವರು ಉಪಸ್ಥಿತರಿದ್ದರು.
ಸುಕುಮಾರ ಬನ್ನೂರೆ,
ಇನ್ ನ್ಯೂಸ್, ಕಾಗವಾಡ.