arrest

ಹೋಳಿ ಹಬ್ಬದ ವೇಳೆ ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ…

Share

ಹೋಳಿ ಹಬ್ಬದ ಪೂರ್ವದಲ್ಲೇ ಬೆಳಗಾವಿ ಖಡೇಬಝಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಬೆಳಗಾವಿಯ ಗುಡಶೆಡ್ ರಸ್ತೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸುಮಾರು 7 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಸಂಗ್ರಹಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಗೋವಾ ರಾಜ್ಯದಿಂದ ಮದ್ಯವನ್ನು ತಂದು ಕರ್ನಾಟಕದಲ್ಲಿ ಮಾರಾಟ ಮಾಡುವ ಉದ್ಧೇಶದಿಂದ ಸಂಗ್ರಹಿಸಿಟ್ಟ ಮಾಹಿತಿ ದೊರೆಯುತ್ತಿದ್ದಂತೆ , ಖಡೇಬಝಾರ್ ಪೊಲೀಸರು ವಿಶೇಷ ತಂಡವನ್ನು ರಚಿಸಿ ದಾಳಿಯನ್ನು ನಡೆಸಲಾಗಿದೆ. ದಾಳಿಯ ವೇಳೆ ಸುಮಾರು 7 ಲಕ್ಷ 30 ಸಾವಿರದ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಮೂರು ಲಕ್ಷ ಮೌಲ್ಯದ ಬುಲೆರೋ ಪಿಕಪ್ ವಾಹನವನ್ನು ಸೀಜ್ ಮಾಡಲಾಗಿದೆ. ಒಟ್ಟು 10 ಲಕ್ಷ 30 ಸಾವಿರ ರೂಪಾಯಿಯ ಮುದ್ದೆಮಾಲನ್ನು ವಶಕ್ಕೆ ಪಡೆಸಿಕೊಳ್ಳಲಾಗಿದೆ. ಅಲ್ಲದೇ, ಆರೋಪಿ ರಾಕೇಶ್ ಚೌಗುಲೆಯನ್ನು ಬಂಧಿಸಲಾಗಿದೆ.

ಎಸ್ಪಿ ಡಾ. ಭೀಮಾಶಂಕರ ಗುಳೇದ, ನಗರ ಪೊಲೀಸ್ ಆಯುಕ್ತಡ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ , ನಿರಂಜನರಾಜ್ ಅರಸ್, ಎಸಿಪಿ ಶೇಖರಪ್ಪ ಎಚ್., ಅವರ ಮಾರ್ಗದರ್ಶನದಲ್ಲಿ ಖಡೇಬಜಾರ ಪೊಲೀಸ ಠಾಣೆಯ ಇನ್ಸಪೇಕ್ಟರ್ ಶ್ರೀಶೈಲ ಗಾಬಿ, ಪಿಎಸ್‌ಐ ಆನಂದ ಆದಗೊಂಡ, ಸಿಬ್ಬಂದಿಗಳಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ, ಬಿ ಎಲ್ ಸರ್ವಿ, ಭರಮಣ್ಣಾ ಕರೆಗಾರ, ಸಂತೋಷ ಬರಗಿ, ಸದಾಶಿವ ಹಲಗಿಮನಿ, ಚನ್ನಪ್ಪ ತೇಲಿ, ಎ ಎಸ್ ಹೆಗ್ಗಣ್ಣವರ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

Tags:

error: Content is protected !!