ಬೆಳಗಾವಿಯ ರಾಮತೀರ್ಥ್ ನಗರದಲ್ಲಿ
ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಸಿಂಹ, ಖಾದಿ ಭಗೀರಥ, ಶ್ರೀ ಗಂಗಾಧರ ರಾವ್ ದೇಶಪಾಂಡೆ ಅವರ 154 ನೇ ಜಯಂತಿ ಕಾರ್ಯಕ್ರಮವನ್ನು ಶ್ರೀ ಗಂಗಾಧರ್ ರಾವ್ ದೇಶಪಾಂಡೆ ಟ್ರಸ್ಟ್ ಕಮಿಟಿ ಹಾಗೂ ಕುಂದರ ನಾಡ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿತ್ತು

ಶ್ರೀ ಗಂಗಾಧರಾವ್ ದೇಶಪಾಂಡೆ ಅವರ ಭಾವಚಿತ್ರಕ್ಕೆ ಉಪಸ್ಥಿತರಿದ್ದ ಗಣ್ಯರು ಪೂಜೆ ಸಲ್ಲಿಸಿ ಗೌರವ ಅರ್ಪಣೆ ಮಾಡಿದರು.ಹಿರಿಯ ಪತ್ರಕರ್ತ ಸುಭಾಷ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿ, ಶ್ರೀ ಗಂಗಾಧರರಾವ್ ದೇಶಪಾಂಡೆ ಅವರ ಸ್ವಾತಂತ್ರ್ಯ ಹೋರಾಟ ,ಕೊಡುಗೆ ಹಾಗೂ ಸಾಧನೆಗಳನ್ನು ಸ್ಮರಿಸಿದರು.ನಗರಸೇವಕ ಹಣಮಂತ ಕೊಂಗಾಲಿ, ನಿವೃತ್ತ ಪೊಲೀಸ ಅಧಿಕಾರಿ ಬೆಟಗೇರಿ, ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ದೇಶಪಾಂಡೆ, ಉಪಾಧ್ಯಕ್ಷ ಡಾ. ತುಕ್ಕಾರ್ ,ಹಿರಿಯ ವಕೀಲರಾದ ಮೋಹನ್ ಮಾವಿನಕಟ್ಟಿ, ಉಪಸ್ಥಿತಿಯಲ್ಲಿ ಶ್ರೀ ಗಂಗಾಧರ್ ರಾವ್ ದೇಶಪಾಂಡೆ ಅಭಿಮಾನಿಗಳು ಮತ್ತು ಕುಂದರನಾಡ ಸಮಸ್ತ ಹಿರಿಯರು ಭಾಗವಹಿಸಿದ್ದರು, ಧನ್ಯವಾದಗಳು