ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಮೇಲೆ ಹಲ್ಲೆ ಮಾಡಿರುವ ಗ್ರಾಮ ಪಂಚಾಯತ ಸದಸ್ಯ, ಆತನ ಮಗ ಮತ್ತು ಆತನೊಂದಿಗಿದ್ದವರ ವಿರುದ್ಧ ಸೂಕ್ಷ ಕ್ರಮ ಕೈಗೊಂಡು ಕನ್ನಡಿಗ ಅಧಿಕಾರಿಗೆ ನ್ಯಾಯ ಒದಗಿಸಬೇಕೆಂದು ಕಿತ್ತೂರು ಕರ್ನಾಟಕ ಸೇನೆಯ ಅಧ್ಯಕ್ಷ ಮಹಾದೇವ ತಳವಾರ ಅವರು ಆಗ್ರಹಿಸಿದ್ದಾರೆ.

ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ನಾಗಪ್ಪ ಕೊಡಲಿ ಅವರು ಅಕ್ರಮವಾಗಿ ಪಹಣಿ ಪತ್ರಿಕೆ ನೀಡದ ಹಿನ್ನೆಲೆ ಗ್ರಾಮ ಪಂಚಾಯತ ಸದಸ್ಯ ಚೇತನ್ ಪಾಟೀಲ್, ಎಂ.ಇ.ಎಸ್’ನ ವಿಕ್ರಮ ಯಳ್ಳೂರಕರ ಮತ್ತು ಶಿವು ಎನ್ನುವವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಂಡಕ್ಟರ್ ಮೇಲಿನ ಹಲ್ಲೆ ಮಾಸುವ ಜಿಲ್ಲೆ ಅಂಬೇವಾಡಿಯಲ್ಲಿ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ. ಎಲ್ಲ ಕನ್ನಡ ಸಂಘಟನೆಗಳು ಉಗ್ರ ಹೋರಾಟ ಕೈಗೊಳ್ಳುವ ಮೊದಲೇ ಪುಂಡತನ ಮೆರೆದ ಗ್ರಾಮ ಪಂಚಾಯತ ಸದಸ್ಯ ಚೇತನ್ ಪಾಟೀಲ್ ಸದಸ್ಯತ್ವ ರದ್ಧುಗೊಳಿಸಿ 6 ವರ್ಷದ ವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕ್ರಮಕೈಗೊಳ್ಳಬೇಕೆಂದು ಕಿತ್ತೂರು ಕರ್ನಾಟಕ ಸೇನೆಯ ಅಧ್ಯಕ್ಷ ಮಹಾದೇವ ತಳವಾರ ಅವರು ಆಗ್ರಹಿಸಿದ್ದಾರೆ.