Bailahongala

ಬೈಲಹೊಂಗಲ : ಹೋಳಿ ಹಬ್ಬ ಶಾಂತಿಯುತವಾಗಿ ಆಚರಿಸಿ- ಸಿಪಿಐ ಸಾಲಿಮಠ

Share

ಬೈಲಹೊಂಗಲ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಸಾರ್ವಜನಿಕರನ್ನು ಕರೆದು ಪೊಲೀಸ್ ಇಲಾಖೆ ಅಧಿಕಾರಿಗಳು ಶಾಂತಿ ಸಭೆ ನಡೆಸಿದರು ಹಾಗೂ ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದ ದಿಂದ ಆಚರಣೆ ಮಾಡಬೇಕು ಹಾಗೂ ಯಾವುದೇ ತರಹದ ಕಾನೂನು ಬಾಹಿರ ಚಟುವಟಿಕೆಗಳನ್ನು ಹೋಳಿ ಹಬ್ಬದಲ್ಲಿ ನಡೆಸಬಾರದು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿ ಹೇಳಿದರು

ಇದೇ ಸಂದರ್ಭದಲ್ಲಿ ಮಾತನಾಡಿದಂತ ಸಿಪಿಐ ಸಾಲಿಮಠ ಯಾವುದೇ ತರದ ಕೆಮಿಕಲ್ ಬಣ್ಣವನ್ನು ಹೋಳಿ ಹಬ್ಬದಲ್ಲಿ ಬಳಸಬಾರದು
ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ತರನಾಗಿ ಒತ್ತಾಯಪೂರ್ಣವಾಗಿ ಬಣ್ಣವನ್ನು ಎರ್ಚಬಾರದು ಯಾರು ಕೂಡ ಕುಡಿದ ಅಮಲಿನಲ್ಲಿ ಬಣ್ಣಗಳನ್ನು ಬೇರೆ ವ್ಯಕ್ತಿಗಳಿಗೆ ಎರಚಬಾರದು ಹಂತ ವ್ಯಕ್ತಿಗಳ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಲಾಗುವುದು

ಹೋಳಿ ಹಬ್ಬದಲಿ ನೈಸರ್ಗಿಕ ಬಣ್ಣವನ್ನೇ ಬಳಸಬೇಕು ಎಂದು ಸಾರ್ವಜನಿಕರಿಗೆ ತಿಳಿಹೇಳಿದರು ಅದೇ ದಿನ ಪಿಯುಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಒತ್ತಾಯಪೂರ್ವಕವಾಗಿ ಬಣ್ಣವನ್ನು ಹಚ್ಚಬಾರದು ಈ ಸಭೆಯ ಅಧ್ಯಕ್ಷತೆಯನ್ನು ಡಿವೈಎಸ್ಪಿ ರವಿ ನಾಯ್ಕ ವಹಿಸಿಕೊಂಡಿದ್ದರು

ಈ ಸಭೆಯಲ್ಲಿ ಮಹಾಂತೇಶ್ ತುರುಮರಿ ಮತ್ತು ಪ್ರಮೋದ್ ಕುಮಾರ್ ವಕ್ಕುಂದ ,ಸೋಮು ಕರವಿನವರ ಹಾಗೂ ಪಟ್ಟಣ ಸಾರ್ವಜನಿಕ ಮತ್ತು ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು

ವರದಿಗಾರರು
ಶಾನೂಲ ಮ
ಬೈಲಹೊಂಗಲ

Tags:

error: Content is protected !!