ಧಾರವಾಡದ ಹೊಸಯಲ್ಲಾಪುರದಲ್ಲಿರುವ ತ್ಯಾಜ್ಯ ವಿಲೇವಾರ ಘಟಕದಲ್ಲಿನ ವಿಷಪೂರಿತ ಹೋಗೆ ಯಿಂದ ಬೇಸತ್ತು ಸ್ಥಳೀಯ ನಿವಾಸಿಗಳು ಧಾರವಾಡದಲ್ಲಿ ಬೀದಿಗೆ ಇಳಿದು ರಸ್ತೆ ತಡೆ ಪ್ರತಿಭಟನೆ ನಡೆಸಿ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕಯ ವಿರುದ್ಧ ಆಕ್ರೋಶ ಹೊರಹಾಕಿದರು.

ಧಾರವಾಡ ಹೊಸಯಲ್ಲಾಪುರ ಜನತ ನಗರದ ಸುಣ್ಣದ ಬಟ್ಟಿ ಬಳಿಯ ರಸ್ತೆ ತಡೆದ ಸ್ಥಳೀಯ ನಿವಾಸಿಗಳು ಮಾಹಾನಗರ ಪಾಲಿಕೆಯ ಅಧಿಕಾರಿಗಳ ಸೇರಿ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಸದ ಗುಡ್ಡಕ್ಕೆ ಆಗಾಗ ಬೆಂಕಿ ಬೀಳುತ್ತಲೇ ಇದೆ. ಈ ತ್ಯಾಜ್ಯಕ್ಕೆ ಮುಕ್ತಿ ನೀಡಿ ಎಂದು ಸಾವಿರಾರು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾರೂ ಕ್ಯಾರೇ ಎಂದಿಲ್ಲ. ನಿನ್ನೆ ಕಸಕ್ಕೆ ಬೆಂಕಿ ಬಿದ್ದು ವಿಷಪೂರಿತ ಹೊಗೆ ಜನ್ನತನಗರ, ಹೊಸಯಲ್ಲಾಪುರ, ಟೋಲನಾಕಾ, ಗಾಂಧಿನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಆವರಿಸಿ ಜನ ಹೊರಗೆ ಬರದಂತಾಗಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ಉಸಿರಾಟ ಮಾಡಲು ಆಗದ ಸ್ಥಿತಿನಿರ್ಮಾಣವಾಗಿದ್ದು,
ಕೂಡಲೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು. ಇನ್ನೂ ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಪಾಲಿಕೆ ಆಯುಕ್ತರು ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಸ್ಥಳೀಯರು ಆ ಕಸದ ಗುಡ್ಡಕ್ಕೆ ಮುಕ್ತಿ ನೀಡುವ ಭರವಸೆ ನೀಡಿದ ಮೇಲೆಯೇ ಪ್ರತಿಭಟನೆ ಹಿಂಪಡೆಯುವುದಾಗಿ, ತಮ್ಮ ನಿಲುವು ತಿಳಿಸಿದ್ದರಿಂದ ಬರುವ ಮೇ ತಿಂಗಳವರೆಗೂ ಕಾಲಾವಕಾಶ ನೀಡಿ ಆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಭರವಸೆ ನೀಡಿದರು. ಸದ್ಯ ಈಗ ಆಯುಕ್ತರ ಭರವಸೆ ಹಿನ್ನಲೆ ಸ್ಥಳೀಯರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.