kudachi

ಬೆಳಗಾವಿ ಬಸವಣ ಕುಡಚಿ ಜಾತ್ರೆ ಹಿನ್ನೆಲೆ…

Share

ಬೆಳಗಾವಿಯ ಬಸವಣ ಕುಡಚಿಯ ಗ್ರಾಮ ದೇವರು ಶ್ರೀ ಬಸವಣ್ಣ ಮತ್ತು ಬ್ರಹ್ಮದೇವರ ಜಾತ್ರೆಯ ನಿಮಿತ್ಯ ಕಿಚ್ಚು ಹಾಯುವ ಕಾರ್ಯಕ್ರಮದ ಹಿನ್ನೆಲೆ ಹದಗೆಟ್ಟು ಹೋಗಿದ್ದು ರಸ್ತೆಯನ್ನು ಶಾಸಕ ಆಸೀಫ್ ಸೇಠ್ ಅವರ ವಿಶೇಷ ಪ್ರಯತ್ನದಿಂದ ಅಭಿವೃದ್ಧಿಪಡಿಸಲಾಯಿತು.

ಸೋಮವಾರ 24 ರಿಂದ ಬೆಳಗಾವಿಯ ಬಸವಣ ಕುಡಚಿಯ ಗ್ರಾಮ ದೇವರು ಶ್ರೀ ಬಸವಣ್ಣ ಮತ್ತು ಬ್ರಹ್ಮದೇವರ ಜಾತ್ರೆಯ ನಿಮಿತ್ಯ ಕಿಚ್ಚು ಹಾಯುವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಅಂಬಲಿ ಗಾಡಿಗಳ ಮೆರವಣಿಗೆ ನಡೆಯುವ ಮಾರ್ಗ ಸಂಪೂರ್ಣವಾಗಿ ಹದಗೆಟ್ಟು ಹೋಗಿತ್ತು. ಈ ಸಮಸ್ಯೆಯನ್ನು ಕಾಂಗ್ರೆಸ್ ಸದಸ್ಯರು ಮತ್ತು ಗ್ರಾಮಸ್ಥರು ಶಾಸಕ ಆಸೀಫ್ ಸೇಠ್ ಅವರ ಗಮನಕ್ಕೆ ತರುತ್ತಿದ್ದಂತೆ ಅವರು ಕೂಡಲೇ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಕೃತಜ್ಞತೆಗಳನ್ನು ವ್ಯಕ್ತಪಡಿಸಲಾಗುತ್ತಿದೆ.
ಈ ವೇಳೆ ಸಮಾಜಸೇವಕ ಸುನೀಲ್ ಅನಗೋಳಕರ, ಸಾಗರ್ ತಾರಿಹಾಳಕರ, ಬಸವರಾಜ್ ಸಾವಕಾರ್, ಪ್ರಕಾಶ ಮುತಗೇಕರ, ಬಸವಂತ ಬೇಡಕಾ, ಪಾಪೂಲ್ ಮುಲ್ಲಾ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.

Tags:

error: Content is protected !!