ಇವತ್ತಿನ ದಿವಸ ಗೋಕಾಕ ತಾಲ್ಲೂಕಿನಲ್ಲಿ , ಸೋಮವಾರ 10-03-2025 ರಂದು ನಡೆದ ಬೆಳಗಾವಿ ತಾಲೂಕಿನ ಅಂಬೆವಾಡಿ ಪಂಚಾಯತ ಕಾರ್ಯದರ್ಶಿಯವರ ಮೇಲೆ ಹಲ್ಲೆ ಖಂಡಿಸಿ, ಸೂಕ್ತ ಕ್ರಮಕ್ಕಾಗಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಗೋಕಾಕ್ ಹಾಗೂ ಮಾನ್ಯ ತಹಶಿಲ್ದಾರರು ಗೋಕಾಕ ಇವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶಾಖೆ ಗೋಕಾಕ ಅಧ್ಯಕ್ಷರು ವಿನಾಯಕ್ ಮಾಳಿ ಹಾಗೂ ಸರ್ವ ನಿರ್ದೇಶಕರು, ಕಾರ್ಯದರ್ಶಿ ಗ್ರೇಡ-೧ಮತ್ತು ಗ್ರೇಡ -೨ ಜಿಲ್ಲಾ ಅಧ್ಯಕ್ಷರು ಎಂ.ಎಮ್.ಮಾಹುತ,ಆರ್ ಡಿ ಪಿ ಆರ್ ಅಸೋಸಿಯನ್ ಅಧ್ಯಕ್ಷರು ಎಸ್ ಎಸ್ ಜಮಖಂಡಿ ಜಿಲ್ಲಾ ಅಧ್ಯಕ್ಷರು ಲೆಕ್ಕ ಸಹಾಯಕರ ಅರುಣ್ ಕೌಜಲಗಿ ಹಾಗೂ ತಾಲ್ಲೂಕಿನ ಎಲ್ಲ ಇಲಾಖೆಗಳ ಎಲ್ಲಾ ವೃಂದ ಸಂಘಗಳ ಸರ್ವ ಅಧ್ಯಕ್ಷರು ಸದಸ್ಯರು ಪಿಡಿಓ ಕಾರ್ಯದರ್ಶಿ ಸಹಾಯಕರು ದ್ವಿತೀಯ ಲೆಕ್ಕ ಸಹಾಯಕರು ಹಾಜರಿದ್ದರು.