ತಾಯಿ ತನ್ನ ಮೂರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಚಿಂಚಲಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿಯಲ್ಲಿ ಹರಿಯುವ ಕೃಷ್ಣಾ ನದಿಯಿಂದ ತಾಯಿ ಶಾರದಾ ಅಶೋಕ ಢಾಲೆ (32) ಮತ್ತು ಮಕ್ಕಳಾದ ಅಮೃತಾ ಅಶೋಕ ಢಾಲೆ (14), ಅನುಷ್ಕಾ ಅಶೋಕ ಢಾಲೆ (10) ಹಾಗೂ ಆದರ್ಶ್ ಅಶೋಕ ಢಾಲೆ (8) ಶವಗಳನ್ನು ಹೊರ ತೆಗೆದು ಕುಡಚಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.