ಸರ್ಕಾರಿ ಸೇವೆಯನ್ನು ಸಲ್ಲಿಸುತ್ತ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಬೆಳಗಾವಿಯ ಯಲ್ಲಪ್ಪ ಲಕ್ಷ್ಮಣ ಕೋಲಕಾರ ಅವರಿಗೆ ಇಂಟರನ್ಯಾಷನಲ್ ಗ್ಲೋಬಲ್ ಐಕಾನ್ ಸಾಧಕರ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಗೋವಾದಲ್ಲಿ ಇಂಟರ್ ನ್ಯಾಷನಲ್ ಹ್ಯೂಮನ್ ಡೆವೆಲಪಮೆಂಟ್ ಕೌನ್ಸಿಲನ ವತಿಯಿಂದ ಆಯೋಜಿಸಿದ್ದ ಇಂಟರನ್ಯಾಷನಲ್ ಗ್ಲೋಬಲ್ ಐಕಾನ್ ಸಾಧಕರ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಡಾ. ಪ್ರತಾಪಸಿಂಗ್ ತಿವಾರಿ, ಡಾ. ಸಿದ್ಧಗಂಗಮ್ಮಾ, ಸಿದ್ಧಣ್ಣ ಮೇಟಿ, ಡಾ. ಕೆ. ಶಿವರಾಮಯ್ಯಾ,
ಡಾ. ಬ್ಹಿ.ವ್ಹಿ. ಪದ್ಮಾವತಿ, ಡಾ. ಶಶಿಕಲಾ ಬಿ. ಅವರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ಬೆಳಗಾವಿಯ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯರಾಗಿರುವ ಯಲ್ಲಪ್ಪ ಲಕ್ಷ್ಮಣ ಕೋಲಕಾರ ಅವರಿಗೆ ಪ್ರದಾನ ಮಾಡಲಾಯಿತು.