ವಿಜಯಪುರ : ಅದೊಂದು ನದಿ. ಗಡಿನಾಡಿನ ರೈತರ, ಜನತೆಯ ಬದುಕು ಹಸನಾಗಿಸುತ್ತಿರುವ ನದಿ. ಆದ್ರೆ ಆ ನದಿ ಹೆಸರು ಕೇಳಿದ್ರೆ ಇಡಿ ರಾಜ್ಯದ ಜನತೆ ಬೆಚ್ಚಿ ಬಿಳುತ್ತಾರೆ. ಆ ನದಿಯ ಹೆಸರಿನ ಮೇಲೆ ಅದೆಷ್ಟೋ ಕಥೆಗಳು, ಚಲನಚಿತ್ರ ಗಳು ಬಂದು ಹೋಗಿವೆ. ನದಿಯ ದಡದಲ್ಲಿ ನಡೆದ ಕೆಲ ಘಟನೆಗಳಗ ಆ ನದಿಗೆ ಬರಬಾರದ ಆರೋಪಗಳು ಬಂದು ಆ ನದಿ ಪಾತ್ರದ ಜನತೆಗೆ ಅಪಾರ ನೋವನ್ನು ಉಂಟುಮಾಡಿದೆ. ಅಂದ ಹಾಗೆ ಆ ನದಿ ಯಾವುದು? ಆ ನದಿ ಹೆಸರೇಳಿದ್ರೆ ಜನ ಯಾಕೆ ಬೆಚ್ಚಿ ಬೀಳುತ್ತಾರೆ? ಅಷ್ಟಕ್ಕೂ ಆ ನದಿಯ ದಡದಲ್ಲಿ ನಡೆದ ಕಥೆಗಳು ಏನು? ಎಂಬುದರ ಕುರಿತು ಇನ್ ನ್ಯೂಜ್ ಒಂದು ವಿಶೇಷ ಸರಣಿ ಪ್ರಸಾರ ಮಾಡುತ್ತಿದೆ. ನಮ್ಮ ವಿಜಯಪುರ ಜಿಲ್ಲೆಯ ವರದಿಗಾರ ವಿಜಯಕುಮಾರ ಸಾರವಾಡ ನೇತೃತ್ವದಲ್ಲಿ ಇನ್ ನ್ಯೂಜ್ ತಂಡ ಸರಣಿ ವರದಿ ಪ್ರಸಾರ ಮಾಡಲಿದೆ. ನೊಡ್ಕೊಂಡು ಬರೋಣ ಬನ್ನಿ

ವಿಜಯಪುರ ಜಿಲ್ಲೆಯು ವಿಶ್ವಗುರು ಬಸವಣ್ಣನವರ ಜನ್ಮಭೂಮಿ. ಹಲವು ಶರಣಾದಿ ಶರಣರು, ನಡೆದಾಡುವ ದೇವರಿಗೆ ಜನ್ಮವಿತ್ತ ಭೂಮಿ. ಐತಿಹಾಸಿಕ ಸ್ಮಾರಕಗಳನ್ನು ಹೊಂದಿ ಇಡಿ ವಿಶ್ವದಲ್ಲಿ ಹೆಸರು ಮಾಡಿರುವ ಭೂಮಿ. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಭೂಮಿ. ಶೈಕ್ಷಣಿಕ ಕ್ರಾಂತಿಯ ಈ ಭೂಮಿ.ವಿಜಯಪುರ ಜಿಲ್ಲೆಯನ್ನು ಛೋಟಾ ಪಂಜಾಬ್ ಎನ್ನುತ್ತಾರೆ. ಏಕೆಂದರೆ ಇಲ್ಲಿ ಐದು ನದಿಗಳು ಹರಿಯುತ್ತವೆ. ಆದ್ರೂ ಬರಪಿಡಿತ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಹೊಂದಿರುವ ಜಿಲ್ಲೆ. ಐದು ನದಿಗಳಲ್ಲಿ ಭೀಮಾ ನದಿಯು ಒಂದು ಪ್ರಮುಖ ನದಿ ಈ ನದಿಯ ಹೆಸರಿಗೆ ಮಾತ್ರ ಒಂದಷ್ಟು ಘಟನೆಗಳು ಭೀಮೆಗೆ ಕಪ್ಪು ಚುಕ್ಕೆ ಯಾಗಿ ಆ ಚುಕ್ಕೆ ಇಂದು ದೊಡ್ಡದಾಗಿ ಈ ನದಿಯ ಹೆಸರು ಹೇಳಿದ್ರೆ ಸಾಕು ಬೆಚ್ಚಿಬಿಳುವಂತಾಗಿದೆ.
ಇನ್ನೂ ಭೀಮಾನದಿಯ ಕುರಿತು ಹೇಳೊದಾದ್ರೆ ಈ ನದಿಯನ್ನು ಚಂದ್ರಭಾಗ ನದಿ ಎಂತಲೂ ಕರೆಯುತ್ತಾರೆ. ಪಶ್ಚಿಮ ಮತ್ತು ದಕ್ಷಿಣ ಭಾರತದ ಪ್ರಮುಖ ನದಿಯಾಗಿದೆ . ಇದು ಕೃಷ್ಣಾ ನದಿಯನ್ನು ಸೇರುವ ಮೊದಲು ಮಹಾರಾಷ್ಟ್ರ , ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಮೂಲಕ 861 ಕಿಲೋಮೀಟರ್ (535 ಮೈಲಿ) ಆಗ್ನೇಯಕ್ಕೆ ಹರಿಯುತ್ತದೆ . ಒರಟಾದ ಭೂಪ್ರದೇಶದ ಮೂಲಕ ಕಿರಿದಾದ ಕಣಿವೆಯಲ್ಲಿ ಮೊದಲ ಅರವತ್ತೈದು ಕಿಲೋಮೀಟರ್‌ಗಳು ಹರಿದ ಬಳಿಕ ತೀರಗಳು ಪ್ರಾರಂಭವಾಗುತ್ತವೆ. ಮತ್ತು ಜನನಿಬಿಡವಾಗಿರುವ ಫಲವತ್ತಾದ ಕೃಷಿ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಇನ್ನೂ ಭೀಮಾ ನದಿಯ ಜಲಾನಯನ ಪ್ರದೇಶದಲ್ಲಿ ಇಪ್ಪತ್ತೆರಡು ಅಣೆಕಟ್ಟುಗಳಿವೆ.
ಇಷ್ಟೆಲ್ಲಾ ಖ್ಯಾತಿಯ ಈ ನದಿಗೆ ಅಪಖ್ಯಾತಿಯನ್ನು ಹೊಂದುವಂತೆ ಮಾಡಿದ್ದು ಕೆಲ ಅಪರಾಧ ಪ್ರಕರಣಗಳು. ಕೆಲವು ಕುಟುಂಬಗಳ ನಡುವೆ ನಡೆದ ಧ್ವೇಷದ ದಳ್ಳುರಿಯಿಂದ, ನದಿಯ ತೀರದ ಊರುಗಳಲ್ಲಿ ನಡೆದ ದ್ಷೇಷದ ಕೊಲೆಗಳಿಂದ ಭೀಮಾತೀರ ಅಪಖ್ಯಾತಿ ಹೊಂದುವಂತೆ ಮಾಡಿತು. ಈ ನದಿ ತೀರದಲ್ಲಿ ಕೆಲ ಶ್ರೀಮಂತ ಕುಟುಂಬಗಳ ನಡುವಿನ ದ್ವೇಷಕ್ಕೆ ಇಡೀ ನದಿ ತೀರದಲ್ಲಿ ಅಪರಾಧಿಗಳು ಇದ್ದಾರೇನೋ ಎಂಬ ಸಂದೇಶ ರವಾನೆಯಾಗಿಬಿಟ್ಟಿದೆ. ಒಬ್ಬ ಹಿರಿಯ ಪತ್ರಕರ್ತ ನ ಕಪ್ಪು ಬಿಳುಪು ಪತ್ರಿಕೆಗೆ ಮಾರುಕಟ್ಟೆ ಸರಕಾಗಿ ಮಾಡಿಕೊಂಡು ಬಿಟ್ಟರು.
ಅಷ್ಟೇ ಅಲ್ಲದೆ ಈ ತೀರದ ಕುರಿತು ಉಪ್ಪು ಖಾರ ಮಸಾಲೆ ಬೆರೆಸಿ ಬರೆದ ಭೀಮಾತೀರದ ಹಂತಕರು ಎಂಬ ಪುಸ್ತಕ ಮತ್ತಷ್ಟು ಹೆಚ್ಚು ಅಪಖ್ಯಾತಿ ಹೆಚ್ಚಿಸಿತು. ಆ ಹಿರಿಯ ಪತ್ರಕರ್ತರು ಬರೆದ ಪುಸ್ತಕ ಇಂದಿಗೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಅಷ್ಟಕ್ಕೂ ಆ ಪುಸ್ತಕದಲ್ಲಿ ಇರುವದೇ ಸತ್ಯವೋ,ಮಿಥ್ಯವೆ ಎಂಬುದನ್ನು ನೋಡುತ್ತಾ ಹೋದರೆ ಅಪರಾಧದ ವೈಭವೀಕರಣವೆ ಹೊರತು ಅದೆಷ್ಟೋ ಮಿಥ್ಯಗಳನ್ನೆ ಹೊಂದಿದೆ.
ಪ್ರೀಯ ವೀಕ್ಷಕರೇ, ಇನ್ ನ್ಯೂಜ್ ಕೂಡಾ ಭೀಮಾತೀರದ ರಕ್ತ ಚರಿತ್ರೆ ಎಂಬ ಸರಣಿಯಲ್ಲಿ ಅಪರಾಧದ ವೈಭವಿಕರಣ ಗೊಳಿಸದೇ ಸತ್ಯವೇನೂ, ಮಿಥ್ಯವೇನೂ ಎಂಬ ಕುರಿತು, ಭೀಮಾತೀರದಲ್ಲಿ ನಡೆದ ದ್ವೇಷದ ದಳ್ಳುರಿಯಿಂದ ನರಳಿದ ಕುಟುಂಬಗಳೆಷ್ಟು? ಅಷ್ಟಕ್ಕೂ ಈ ದ್ವೇಷಕ್ಕೆ ಕೊನೆಯೇ ಇಲ್ಲವೇ? ಎಂಬ ಕುರಿತು ಸ್ಪಷ್ಟ ವರದಿ ಕೊಡಲಿದೆ. ನಾಳೆಯಿಂದ ಈ ವರದಿಗಳು ಪ್ರಸಾರವಾಗಲಿವೆ ತಪ್ಪದೇ ವೀಕ್ಷಿಸಿ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.