Vijaypura

ಕೊಲ್ಹಾರ ಸೇತುವೆ ಮೇಲಿಂದ ಬಿದ್ದ ಟಿಪ್ಪರ್…ಚಾಲಕ ಕ್ಲೀನರ್ ಸ್ಥಳದಲ್ಲೇ ಸಾವು….

Share

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರಭಾಗದಲ್ಲಿರುವ ಕೃಷ್ಣಾನದಿಯ ಸೇತುವೆ ಮೇಲಿಂದ ಟಿಪ್ಪರ್ ಬಿದ್ದಿರುವ ಪರಿಣಾಮ ಟಿಪ್ಪರ್ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಮೃತ ದುರ್ದೈವಿಗಳನ್ನ ಬಸವನಬಾಗೇಬಾಡಿ ತಾಲೂಕಿನ ಯಾಳವಾರ ಗ್ರಾಮದ ಚಾಲಕ ಸಚಿನ್ (32)ಹಾಗೂ ಕ್ಲೀನರ್ ಪರಶುರಾಮ (30) ಎಂದು ಗುರುತಿಸಲಾಗಿದೆ.

ಕೊಲ್ಹಾರ ಪಟ್ಟಣದ ಹೊರಭಾಗದಲ್ಲಿ ಕೃಷ್ಣಾನದಿಗೆ
ಅಡ್ಡಲಾಗಿ ಮೂರು ಕಿಮೀ ವ್ತಾಪ್ತಿಯ ಬೃಹತ್ ಸೇತುವೆ ನಿರ್ಮಿಸಲಾಗಿದೆ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಟಿಪ್ಪರ್ ಡಿಕ್ಕಿಯಾಗಿ ನದಿಯ ತಟದಲ್ಲಿ ಬಿದ್ದಿದೆ ಎನ್ನಲಾಗಿದೆ.

ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!