State

ಕನ್ನಡಿಗರ ವಿರುದ್ಧ ಪಿತೂರಿ ಮಾಡುವರರನ್ನು ಹತ್ತಿಕ್ಕಬೇಕಿದೆ…

Share

ಬೆಳಗಾವಿಯಲ್ಲಿ ನಡೆದ ಘಟನೆಯನ್ನು ಯಾರೂ ಕೂಡ ಕ್ಷಮಿಸಲು ಸಾಧ್ಯವಿಲ್ಲ. ಕನ್ನಡಿಗರ ತೇಜೋವಧೆ ಸರಿಯಲ್ಲ. ಪಿತೂರಿಗಳನ್ನು ನಡೆಸುವವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ನೆಲದ ನೀರು, ಗಾಳಿ ಮತ್ತು ಅನ್ನವನ್ನು ಸೇವಿಸಿ ರಾಜ್ಯದ ವಿರುದ್ಧ ಪಿತೂರಿ ನಡೆಸುತ್ತಿರುವುದನ್ನ ಯಾರೂ ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯಲ್ಲಿ ನಡೆದ ಘಟನೆಯನ್ನು ಯಾರೂ ಕೂಡ ಕ್ಷಮಿಸಲು ಸಾಧ್ಯವಿಲ್ಲ. ಕನ್ನಡಿಗರ ತೇಜೋವಧೆ ಸರಿಯಲ್ಲ. ಪಿತೂರಿಗಳನ್ನು ನಡೆಸುವವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಇನ್ನು ಹ್ಯಾರಿಸ್ ಬೆಂಬಲಿಗನ ಹತ್ಯೆಗೆ ಸಂಬಂಧಿಸಿದಂತೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆ. ಉದಯಗಿರಿಯ ಘಟನೆಯನ್ನು ಖಂಡಿಸಿ ಮೈಸೂರು ಚಲೋ ಪ್ರತಿಭಟನೆಯನ್ನು ನಡೆಸಲಾಗುವುದು. ರಾಜ್ಯ ಸರ್ಕಾರ ದಾಂಧಲೆ ಮಾಡುವವರನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದೆ. ರಾಜ್ಯದಲ್ಲಿ ಅಸುರಕ್ಷತೆ ನಿರ್ಮಾಣವಾಗಿದೆ. ಗೃಹ ಸಚಿವರು ರಾಜೀನಾಮೆ ಕೊಡುತ್ತೇನೆಂಬ ಧಾಟಿಯಲ್ಲಿ ಮಾತನಾಡಿದ್ದು, ಅವಿವೇಕತನದ ಪರಮಾವಧಿ ಎಂದರು.

Tags:

error: Content is protected !!