Vijaypura

ಶುಲ್ಕ ಭರಿಸದ ವಿದ್ಯಾರ್ಥಿಗಳನ್ನು ಹೊರ ಹಾಕಿದ ಶಿಕ್ಷಕರು: ಶಮ್ಸ್ ಶಾಲೆಯ ವಿರುದ್ಧ ಪೋಷಕರ ತೀವ್ರ ಆಕ್ರೋಶ

Share

ವಿಜಯಪುರ: ಶಿಕ್ಷಕರು ಶಾಲಾ ಶುಲ್ಕ ಬಾಕಿ ಭರಿಸದ ಕಾರಣ ಪರೀಕ್ಷೆಯಿಂದ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ ಘಟನೆ ವಿಜಯಪುರ ನಗರದ ಕೀರ್ತಿ ನಗರದ ಶಮ್ಸ್ ಶಾಲೆಯಲ್ಲಿ ನಡೆದಿದೆ. ಎರಡನೇ ಸೆಮಿಸ್ಟರ್ ಯುನಿಟ್ ಟೆಸ್ಟ್ ನಿಂದ ವಿದ್ಯಾರ್ಥಿಗಳನ್ನು ಹೊರ ಹಾಕಿದ್ದಾರೆ.

ಪೋಷಕರು ಎರಡನೇ ಸೆಮಿಸ್ಟರ್ ಶುಲ್ಕ ಬಾಕಿ ಇರಿಸಿಕೊಂಡಿದ್ದರು. ಡಿ ವಿ ದರಬಾರ್ ಮೆಮೋರಿಯಲ್ ಟ್ರಸ್ಟ್ ಗೆ ಸೇರಿರೋ ಶಮ್್ಸ ಶಾಲೆ ಇದಾಗಿದೆ. ಪೋಷಕರು ಶಾಲೆಗೆ ಆಗಮಿಸಿ ಪ್ರಶ್ನೆ ಮಾಡಿದ್ದಾರೆ. ಪೂರ್ಣ ಶುಲ್ಕ ಭರಿಸಿದ್ದರೂ ಕೆಲ ವಿದ್ಯಾರ್ಥಿಗಳನ್ನು ಹೊರ ಹಾಕಲಾಗಿದೆ ಎಂದು ಪೋಷಕರು ಶಿಕ್ಷಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದರು. ಎರಡನೇ ಸೆಮಿಸ್ಟರ್ ನ ಮೂರ್ನಾಲ್ಕು ಸಾವಿರ ಬಾಕಿ ಇರಿಸಿಕೊಂಡಿದ್ದೇವೆ. ಅಷ್ಟು ಮಾತ್ರಕ್ಕೆ ಪರೀಕ್ಷೆಯಿಂದ ನಮ್ಮ ಮಕ್ಕಳನ್ನು ಯಾಕೆ ಹೊರ ಹಾಕಿದ್ದು ಎಂದು ಪ್ರಶ್ನೆ ಮಾಡಿದರು. ಪರೀಕ್ಷೆಯಿಂದ ಹೊರ ಹಾಕಿದ್ದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆ ಕುರಿತು ಗಮನ ಹರಿಸುತ್ತೇವೆಂದ ಶಾಲಾ ಮುಖ್ಯೋಪಾಧ್ಯಾಯರು ಶುಲ್ಕ ಸಮಸ್ಯೆ ಬಗೆ ಹರಿದ ಬಳಿಕ ವಿದ್ಯಾರ್ಥಿಗಳಿಗೆ ಪುನಃ ಯುನಿಟ್ ಟೆಸ್ಟ್ ನಡೆಸಲಾಗುತ್ತದೆ ಎಂದು ಮುಖ್ಯೋಪಾಧ್ಯಾಯರಾದ ರೇವತಿ ಕುಲಕರ್ಣಿ ಮಾಹಿತಿ ನೀಡಿದ್ದಾರೆ‌. ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ದ ಪೋಕಷರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Tags:

error: Content is protected !!