Belagavi

ಮಹಾಪಾಲಿಕೆಯಲ್ಲಿ ಒಂದೇ ದಿನ 46 ಸಿಬ್ಬಂದಿ ವರ್ಗಾವಣೆ

Share

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿನ 46 ಜನ ಸಿಬ್ಬಂದಿಗಳನ್ನು ಕಾನೂನು ಬಾಹಿರವಾಗಿ ಕೇವಲ ನಾಲ್ಕು ದಿನಗಳಲ್ಲೇ ವರ್ಗಾವಣೆ ಮಾಡಿದ ಬಗ್ಗೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ಅವರು ಸ್ಪಷ್ಟಿಕರಣ ನೀಡಿದ್ದು, ಮಹಾಪಾಲಿಕೆ ಆಡಳಿತ ಸುಧಾರಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದೇ ಈ ಬದಲಾವಣೆಯನ್ನು ಮಾಡಲಾಗಿದೆ. ತಮ್ಮ ಮೇಲೆ ಮಾಡಿದ ಆರೋಪ ಸತ್ಯಕ್ಕೆ ದೂರು ಎಂದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ ಬಿ. ಅವರು ಕೇವಲ ನಾಲ್ಕು ದಿನಗಳಲ್ಲೇ ಮಹಾನಗರ ಪಾಲಿಕೆಯಲ್ಲಿನ 46 ಜನ ಸಿಬ್ಬಂದಿಗಳನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆ ಇಂದು ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, 2024ರ ನವೆಂಬರ್ 15ರಂದೆ ನಾವು ಆಂತರಿಕ ನಿಯೋಜನೆ ಮಾಡಿದ್ದೇವೆ, 46ಸಿಬ್ಬಂದಿಗಳ ಹೆಸರಿರುತ್ತೆ ಅಷ್ಟೇ, ಅದರಲ್ಲಿ 26 ಜನಕ್ಕೆ ಅವರು ಈಗಾಗಲೇ ಕೆಲಸ ಮಾಡುವ ವಿಭಾಗದಲ್ಲೇ ಸ್ವಲ್ಪ ಹೆಚ್ಚುವರಿ ಜವಾಬ್ದಾರಿ ನೀಡಿ ನಿಯೋಜಿಸಲಾಗಿದ್ದು, ಉಳಿದ 20 ಸಿಬ್ಬಂದಿಗಳನ್ನು ಇಲ್ಲೇ ಆಂತರಿಕವಾಗಿ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನಿಯೋಜನೆ ಮಾಡಲಾಗಿದ್ದು, ಇದು ಪಾಲಿಕೆಯ ಆಡಳಿತ ಸುಧಾರಣೆ ದೃಷ್ಟಿಯ ಉದ್ದೇಶದಿಂದ ಮಾತ್ರ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇನ್ನು ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಒಂದೇ ವಿಭಾಗದಲ್ಲಿ ಕೆಲಸ ಮಾಡಿಕೊಂಡಿರುವ ಕೆಲ ಸಿಬ್ಬಂದಿಗಳನ್ನು ಹೊರಗಡೆ ಹೋಗಿ ಟ್ರೇಡ್ ಲೈಸೆನ್ಸ್ ಮಾಡಲು ಆರೋಗ್ಯ ನಿರೀಕ್ಷಕರನ್ನಾಗಿ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿದೆ. ಆರೋಗ್ಯ ಶಾಖೆಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು .

Tags:

error: Content is protected !!