ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ರವರು ಮುಂದಿನ ಮುಖ್ಯಮಂತ್ರಿಗಳಾಗಲೆಂದು ಹಾರೈಸಿ, ಪ್ರಯಾಗ್ ರಾಜ್ ದಲ್ಲಿ ನಡೆಯುತ್ತಿರುವ ಮಹಾಕುಂಬಮೇಳದಲ್ಲಿ ಭಾಗವಹಿಸಿರುವ ತುಮಕೂರು, ಬೆಂಗಳೂರು, ರಾಮದುರ್ಗ ಅಭಿಮಾನಿಗಳು ಪವಿತ್ರ ಗಂಗಾ ನದಿಯಲ್ಲಿ ಬುಧವಾರ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರಯವ ದುರಾಡಳಿತ, ಕೊಲೆ, ಸುಲಿಗೆ, ದೌರ್ಜನ್ಯಗಳಿಂದ ಅಶಾಂತಿ ಸೃಷ್ಟಿ, ನಿಂತ ಅಭಿವೃದ್ಧಿ ಕಾರ್ಯದಿಂದ ಬೇಸತ್ತಿದ್ದಾರೆ. ಆದ್ದರಿಂದ ಕೇಂದ್ರದ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ರವರು ಮುಂದಿನ ಮುಖ್ಯಮಂತ್ರಿ ಆಗಲೆಂಬ ಪ್ರಾರ್ಥನೆ ಸಲ್ಲಿಸಿದ್ದಾರೆ.