ಹೈಕಮಾಂಡ್ ನಾಯಕರು ಒಂದು ವಾರದಲ್ಲಿ ತಮ್ಮ ನಿರ್ಧಾರ ತಿಳಿಸಲಿದ್ದಾರೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಪಕ್ಷದ ಒಳಗಿನ ಗೊಂದಲ ಮತ್ತು ಮುಂದಿನ ನಾಯಕತ್ವದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಜಗನ್ನಾಥ ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2024-25ರ ಬಜೆಟ್ ರೈತರು, ಬಡವರು, ಮಹಿಳೆಯರ ಪರವಾಗಿದೆ. ಈ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ ಕನಸನ್ನು ಸಾಕಾರಗೊಳಿಸುತ್ತದೆ ಎಂದು ಅವರು ಶ್ಲಾಘಿಸಿದರು. ಮಧ್ಯಮ ವರ್ಗದವರಿಗೆ ಹೆಚ್ಚುವರಿ ಲಾಭ ಕಲ್ಪಿಸುವ ಈ ಬಜೆಟ್ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಜಯೇಂದ್ರ ಅವರ ಹೇಳಿಕೆಯಲ್ಲಿ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿವೆ. “ನಾನು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನಾನು ಈ ಹುದ್ದೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ, ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ಆದರೆ, ಪಕ್ಷದ ಒಳಗಿನ ಗೊಂದಲಗಳು ನಿಜ. ಅದನ್ನು ಸರಿಪಡಿಸಬೇಕಾಗಿದೆ” ಎಂದು ಅವರು ಹೇಳಿದರು.ಹಿರಿಯ ನಾಯಕರು ಬಿಎಸ್‌ವೈ ಕುರಿತು ಮಾಡುತ್ತಿರುವ ಟೀಕೆಗಳನ್ನು ವಿಪರ್ಯಾಸವೆಂದು ಬಣ್ಣಿಸಿದ ವಿಜಯೇಂದ್ರ, “ಒಂದು ವರ್ಷದಿಂದ ಬಿಎಸ್‌ವೈ ತೇಜೋವಧೆ ಮಾಡುತ್ತಿದ್ದಾರೆ. ಹಿರಿಯ ನಾಯಕರು ಅದನ್ನು ತಡೆಯಬೇಕು” ಎಂದು ಕಿಡಿಕಾರಿದರು.
ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದ್ದು, ಬಹುಶಃ ಈ ತಿಂಗಳ 20ರೊಳಗೆ ನಿರ್ಧಾರ ಆಗಬಹುದು ಎಂದು ಅವರು ತಿಳಿಸಿದರು. “ರಾಜ್ಯಾಧ್ಯಕ್ಷನ ನೇಮಕ ಕಾರ್ಯಕರ್ತರ ಅಭಿಪ್ರಾಯ ಪಡೆದು ಮಾಡಬಹುದು” ಎಂದೂ ವಿವರಿಸಿದರು.”ನನಗೆ ಅನುಭವ ಇಲ್ಲ ಎಂದು ಹೇಳುತ್ತಾರೆ. ಆದರೆ, ನಾನು ಕಾರ್ಯಕರ್ತನಾಗಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದೇನೆ. ಪಕ್ಷವನ್ನು ಸಮರ್ಥವಾಗಿ ನಡೆಸಿದ್ದೇನೆ” ಎಂದು ವಿಜಯೇಂದ್ರ ಪ್ರತಿಪಾದಿಸಿದರು.
ಪಕ್ಷದ ಭವಿಷ್ಯ, ನಾಯಕತ್ವ ಮತ್ತು ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ವಿಜಯೇಂದ್ರ, “ಹೈಕಮಾಂಡ್ ಒಂದು ವಾರದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತದೆ.
ಇನ್ನು ದೆಹಲಿಯಲ್ಲಿ ನಡೆದ ವಿಧಾನಸಭೆ ಉಪಚುನಾವಣೆ ಕುರಿತು ಅವರು ಪ್ರತಿಕ್ರಿಯೆ ನೀಡುತ್ತಾ, 60% ಮತದಾನವಾಗಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಜನ ಕಾಂಗ್ರೆಸ್‌ನ ಗ್ಯಾರಂಟಿ ಭ್ರಮೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.