ಅಳಗವಾಡಿ ರಾಯಬಾಗ ತಾಲೂಕಿನ ಭೆಂಡವಾಡ ಗ್ರಾಮದ ರೈತನ ಮೆಕ್ಕೆಜೋಳ ಬನವಿಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ.

ಭೆಂಡವಾಡ ಗ್ರಾಮದ ಅಣ್ಣಪ್ಪ ಕದಂ ಎಂಬ ರೈತನ ಐದು ಟ್ರಾಲಿ ಕನಕಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾಗಿದ್ದು ಸ್ಥಳಕ್ಕೆ ರಾಯಬಾಗ್ ಅಗ್ನಿಶಾಮಕ ಸಿಬ್ಬಂದಿ ಬಂದು ಎಲ್ಲಾ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಇನ್ನು ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಾಜು ರೂ. 1.20 ನಷ್ಟ ವಾಗಿರುತ್ತದೆ ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿರುತ್ತಾರೆ. ಬರುವ ಬೇಸಿಗೆ ಕಾಲದಲ್ಲಿ ಅತಿಯಾದ ತಾಪಮಾನ ಹಾಗೂ ವಿದ್ಯುತ್ ಅವಗಡಗಳಿಂದ ರೈತರು ಎಚ್ಚರಿಕೆಯಿಂದ ಇರಬೇಕೆಂದು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಆರ್ ಎನ್ ಗಾಮನಗಟ್ಟಿ ತಿಳಿಸಿರುತ್ತಾರೆ