ಕಾಗವಾಡ : ಭಾರತ ದೇಶದಲ್ಲಿ ಜನಿಸಿದ ನಾವು ಬಹಳಷ್ಟು ಸೌಭಾಗ್ಯವಂತರ ನಮ್ಮ ದೇಶದ ಆದ್ಯಾತ್ಮಿಕ ಶಕ್ತಿ, ಆಧ್ಯಾತ್ಮಿಕ ಸಂಸ್ಕಾರ ನಮ್ಮ ದೇಶದಲ್ಲಿ ಆಗಿ ಹೊಗಿದಂತಹ ಶರಣರು, ಅನೇಕ ತ್ಯಾಗಿಗಳು, ವೀರರು, ಇವರನ್ನು ಹಾಗೂ ಬಸವಣ್ಣಾ, ಭಗವಾನ ಮಹಾವೀರ ಇವರನ್ನು ನಾವು ಕಂಡಿರಲಿಲ್ಲ ಆದರೆ ನಡೆದಾಡುವ ದೇವರು ಎಮದು ಹೆಸರಾಂತರಾದ ಸಿದ್ದೇಶ್ವರ ಸ್ವಾಮಿಜಿಗಳನ್ನು ಕಂಡಿದ್ದೇವೆ ಅವರ ಆರ್ಸಿವಾದ ಪಡೆದುಕೊಂಡಿದ್ದೇವೆ ನಾವೆಲ್ಲರು ಧನ್ಯರು ಎಂದು ಮಾಜಿ ಸಚಿವೆ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಬುಧುವಾರಂದು ಕಾಗವಾಡದಲ್ಲಿ ಪ್ರಜಾ ಭವನ ಕಟ್ಟಿಸುವ ಸ್ಥಳದಲ್ಲಿ ಪ.ಪೂ ಬಸವಲಿಂಗ ಸ್ವಾಮಿಜಿ, ಮಹೇಶಾನಂದ ಸ್ವಾಮಿಜಿ, ಮರೇಶ್ವರ ಮಹಾರಾಜರು, ಡಾ// ಶ್ರದ್ದಾನಂದ ಸ್ವಾಮಿಜಿ ಹೀಗೆ ಅನೇಕ ತ್ಯಾಗಿಗಳ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿ ಸಿದ್ದೇಶ್ವರ ಸ್ವಾಮಿಜಿಗಳ ಎತ್ತರವಾದ ನಿರ್ಮಿಸಿದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಭಾರತೀಯ ಸಮಸ್ಕೃತಿ ಉತ್ಸವ ಸೇವಾ ಸಮಿತಿ, ಪ್ರವಚನ ಸೇವಾ ಸಮಿತಿ, ಕಾಗವಾಡ, ಕಾಗವಾಡ ಪಟ್ಟಣ ಹಾಗೂ ಸುತ್ತಲಿನ ಸಮಸ್ತ ಭಕ್ತಾದಿಗಳು ಮತ್ತು ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಮಹಿಳಾ ಮಂಡಳದ ಸದಸ್ಯರು ಹೀಗೆ ಸುಮಾರು ಹತ್ತು ಸಾವಿರ ಭಕ್ತರು ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ