Kagawad

ಕಾಗವಾಡದ ಮಲ್ಲಿಕಾರ್ಜುನ್ ವಿದ್ಯಾಲಯ ಕ್ರೀಡಾಂಗಣದಲ್ಲಿ ಪ್ರಜಾಪಿತ ಬ್ರಹ್ಮಿಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗ ಚಿತ್ರ ಪ್ರದರ್ಶನ ಶಿಬಿರ.

Share

ಕಾಗವಾಡ ಪಟ್ಟಣದ ಶ್ರೀ ಮಲ್ಲಿಕಾರ್ಜುನ್ ವಿದ್ಯಾಲಯದ ಕ್ರೀಡಾಂಗಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗ ಚಿತ್ರ ಪ್ರದರ್ಶನ ಶಿಬಿರವನ್ನು ಕಳೆದ ಮೂರು ದಿನಗಳಿಂದ ಹಮ್ಮಿಕೊಳ್ಳಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಇದರ ಲಾಭ ತೆಗೆದುಕೊಂಡಿದ್ದಾರೆ.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಚಿಕ್ಕೋಡಿ ಶಿವಾ ಕೇಂದ್ರದ ಸಂಚಾಲಿಕ ಬಿ ಕೆ ಶಾಂತಾ ಅಕ್ಕನವರ ನೇತೃತ್ವದಲ್ಲಿ ಮೂರು ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ. ಕಾಗವಾಡ ಶಿವಾ ಕೇಂದ್ರದ ಬಿ ಕೆ ಸುಲೋಚನ ಅಕ್ಕನವರು ಮತ್ತು, ಮಹಾದೇವಿ ಉದಗಾವೆ, ಬಿ ಕೆ ಶಿವಲೀಲಾ, ಬಿ ಕೆ ಮಡಿವಾಳ, ಇವರ ಉಪಸ್ಥಿತಿಯಲ್ಲಿ ಆಗಮಿಸುತ್ತಿರುವ ಶಿಬಿರಾರ್ಥಿಗಳಿಗೆ ಪ್ರಜಾಪಿತ ಬ್ರಹ್ಮಕುಮಾರಿ ಇವರಿಂದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಮಾರ್ಗದರ್ಶನ ನೀಡಲಾಗುತ್ತಿದೆ.
ಚಿಕ್ಕೋಡಿಯ ಬಿ ಕೆ ಶಾಂತಾ ಅಕ್ಕನವರು ಶಿಭಿರದ ಬಗ್ಗೆ ಮಾಹಿತಿ ನೀಡಿ ಈ ಶಿಬಿರದಲ್ಲಿ ಆಧ್ಯಾತ್ಮಿಕದೊಂದಿಗೆ ಸಮಾಜದಲ್ಲಿ ಯಾವ ರೀತಿ ಬಾಳಬೇಕು ಎಂಬ ಮೌಲ್ಯಗಳನ್ನು ತಿಳಿಸುತ್ತಾರೆ ಶಿಬಿರದಲ್ಲಿ ನಾನು ಯಾರು, ನಾನು ಎಲ್ಲಿಂದ ಬಂದೆ ಎಲ್ಲಿಗೆ ಹೋಗಬೇಕು, ಪರಮಾತ್ಮ ಎಲ್ಲಿ ಇದ್ದಾನೆ, ಜಗತ್ತಿನ ಕಾಲಚಕ್ರದ ಅರಿವು ಮತ್ತು ಮಹತ್ವ, ಕರ್ಮದ ರಹಸ್ಯ, ಮರಣದ ನಂತರ ಎಲ್ಲಿಗೆ ಹೋಗುತ್ತೇವೆ, ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿ ಕೊಡಲಾಗಿದೆ.. ಇದರೊಂದಿಗೆ ವಿದ್ಯಾರ್ಥಿಗಳಿಗೆ ಮೌಲಿಕ ಶಿಕ್ಷಣ, ವ್ಯಸನ ಮುಕ್ತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಮಹಿಳೆಯರ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಈ ಶಿಬಿರದಲ್ಲಿ ವಿವರವಾದ ಮಾಹಿತಿ ನೀಡಿದರು,


ಕಾಗವಾಡ ಕೇಂದ್ರದ ಬ್ರಹ್ಮಕುಮಾರಿ ಸುಲೋಚನ ಅಕ್ಕನವರು ಶಿಬಿರದ ಮಾಹಿತಿ ನೀಡುವಾಗ ಕಾಗವಾಡ ಕೇಂದ್ರ ವ್ಯಾಪ್ತಿಯಲ್ಲಿ ಕಳೆದ 30 ವರ್ಷಗಳಿಂದ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸಂಚರಿಸಿ ಅಲ್ಲಿಯ ಮಹಿಳೆಯರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮಾಹಿತಿ ನೀಡಿ ಅವರಲ್ಲಿರುವ ಕೆಲ ಮೂಢನಂಬಿಕೆಗಳು ಹೋಗಲಾಡಿಸಲಾಗಿದೆ. ಅನೇಕ ಯುವಕರು ದುಶ್ಚಟಗಳಿಗೆ ಅಂಟಿಕೊಳ್ಳುತ್ತಿದ್ದಾರೆ ಅವರನ್ನು ಪರಿವರ್ತಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಅವಶ್ಯಕ ಇರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸೇವೆ ಮಾಡಲು ನಮ್ಮ ಸಂಸ್ಥೆ ಮುಂದಾಗಿದೆ. ಈಗಾಗಲೇ ಕಾಗವಾಡ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಉಗಾರ, ಮಂಗಸುಳಿ ಐನಾಪುರ್, ಶೇಡ್ಬಾಳ ಸ್ಟೇಷನ್, ಶಿರಗುಪ್ಪಿ ಮುಂತಾದ ಗ್ರಾಮಗಳಲ್ಲಿ ನಮ್ಮ ಉದ್ದೇಶಗಳನ್ನು ಪ್ರತಿಯೊಬ್ಬರಿಗೆ ತಿಳಿಹೇಳಿ ಸಮಾಜ ಪರಿವರ್ತನೆ ಮಾಡಲು ನಮ್ಮ ಕೇಂದ್ರ ಸಹಕರಿಸುತ್ತಿದೆ ಎಂದರು.

 

ಈ ಶಿಬಿರದಲ್ಲಿ ಪವಾರ್, ಪ್ರಕಾಶ್ ಶೀತಲ್ ,ಆಶಾ, ರಶ್ಮಿ, ಮಧುರ ಮೊದಲಾದವರು ಪಾಲ್ಗೊಂಡಿದ್ದರು.

ಸುಕುಮಾರ್ ಬನ್ನೂರೆ
ಇನ್ನುಳ ನ್ಯೂಸ್ಕಾಗವಾಡ

Tags:

error: Content is protected !!