ದೇಶ ದಿವಾಳಿಯಾಗಿದೆ. ಆದ್ರೇ ಅದರ ವಿಚಾರವಾಗಲಿ ಅಥವಾ ಜನರ ಸಮಸ್ಯೆಗಳಿಗಾಗಿ ಪಿಎಂ ಮಾತನಾಡುವುದಿಲ್ಲ. ಸಿಎಂ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆಂದು ಸಚಿವ ಸಂತೋಷ ಲಾಡ್ ಆರೋಪಿಸಿದ್ದಾರೆ.

ಜಮಖಂಡಿಯಲ್ಲಿ ಮಾಧ್ಯಮಗಾರರೊಂದಿಗೆ ಸಿಎಂ ಮೂಡಾ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಿಜೆಪಿಗರಿಗೆ ಆರೋಪ ಮಾಡುವುದನ್ನ ಬಿಟ್ಟರೇ ಬೇರೇನಿದೆ.ದೇಶದ ವ್ಯವಸ್ಥೆ ಹದಗೆಟ್ಟು ಹೋಗಿದೆ,ಜನ್ರಿಗೆ ಅದರ ಮಾಹಿತಿ ಸಿಗಬಾರದಲ್ಲ ಎಂದು ಆರೋಪಗಳನ್ನು ಮಾಡಿ ದೇಶದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಇವತ್ತು ಡಾಲರ್ ಬೆಲೆ 90ಕ್ಕೆ ಬಂದಿದೆ. ದೇಶದ ಸಮಸ್ಯೆಗಳ ಬಗ್ಗೆ ಜನರು ಮಾತನಾಡಬಾರದು. ಜನತೆಗೆ ವಾಸ್ತವ ಸ್ಥಿತಿ,ಆರ್ಥಿಕ ಸ್ಥಿತಿ ಗೊತ್ತಾಗಬಾರದು.ದೇಶ ದಿವಾಳಿ ಎದ್ದು ಹೋಗಿದೆ,ಇದು ಯುವಕರಿಗೆ ಗೊತ್ತಾಗಬಾರದು. ಅದಕ್ಕಾಗಿ ಸಿಎಂ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಾ ಡ್ರೈವರ್ಟ್ ಮಾಡುತ್ತಿದ್ದಾರೆ. ದೇಶದ ಇವತ್ತಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ಮಾತನಾಡಲ್ಲ. ಬಿಜೆಪಿಗರು ಇಂತದ್ರಲ್ಲೆ ರಾಜಕಾರಣ ಮಾಡೋದು,ಅಭಿವೃದ್ಧಿ ವಿಚಾರದಲ್ಲಿ ಅಲ್ಲ ಎಂದಿದ್ದಾರೆ. ಬೈಟ್