ಕಳೆದ ರಾತ್ರಿ ಬೆಳಗಾವಿ -ರಾಮನಗರ-ಪಣಜಿ ರಸ್ತೆಯ ಅಕ್ರಾಲಿ ಕ್ರಾಸ್ ಬಳಿ ರಸ್ತೆಯ ಮೇಲೆ ನಿಲ್ಲಿಸಿದ್ದ ಟ್ರಕ್ ಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿ,ಅವರ ಪತ್ನಿ ಗಾಯಗೊಂಡ ಘಟನೆ ನಡೆದಿದೆ.

ಉತ್ತರ ಕನ್ನಡದ ಜೋಯಿಡಾ ಜಿಲ್ಲೆಯ ತೀನೈಘಾಟ್ ತಾಲೂಕಿನ ಅಂಥೋನಿ ಗೂಷ್ಪೇರಿ ದಿಲಿಮಾ (35) ಮತ್ತು ಅವರ ಪತ್ನಿ ಜಾಸ್ಮಿನ್ ಅಂಥೋನಿ ದಿಲಿಮಾ (32) ಅವರು ತಮ್ಮ ದ್ವಿಚಕ್ರ ವಾಹನ ಸ್ಕೋಟರ್ ಕೆಎ 32ಕೆ5269 ನಲ್ಲಿ ತೀನೈಘಾಟ್ ನಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಅಕ್ರಾಲಿ ಕ್ರಾಸ್ ಬಳಿ ರಸ್ತೆಯ ಬದಿಯಲ್ಲಿ ನಿಂತಿದ್ದ ಕೆಎ 22 ಡಿ 9743 ನಂಬರ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹೆಚ್ಚಿನ ತನಿಖೆ. ಕೈಗೊಂಡಿದ್ದಾರೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ