Uncategorized

ಕಾಗವಾಡ ಪಟ್ಟಣದಲ್ಲಿ ಗುರು ನಮನ ಹಾಗೂ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ

Share

ಕಾಗವಾಡ ಪಟ್ಟಣದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಜಿಗಳ ಹಾಗೂ ಸಿದ್ದೇಶ್ವರ ಮಹಾಸ್ವಾಮಿಗಳ ಕೃಪಾಶಿರ್ವಾದದೊಂದಿಗೆ ಗುರು ನಮನ ಹಾಗೂ ಭಾರತೀಯ ಸಂಸ್ಕೃತಿಕ ಕಾರ್ಯಕ್ರಮದ ಸತತ ೦೩ ದಿನಗಳಿಂದ ಸ್ವಾಮಿಜಿಗಳ ಸಾನಿಧ್ಯದಲ್ಲಿ ಆಯೋಜಿಸಿದ ಕಾರ್ಯಕ್ರಮದ ಸಮಾರೋಪಗೊಂಡಿತು.

ಕಾಗವಾಡದ ಶ್ರೀ ಮಲ್ಲಿಕಾರ್ಜುನ ವಿದ್ಯಾಲಯದ ಸಭಾಭವನದಲ್ಲಿ ಇದೇ ರವಿವಾರ ದಿ. ೨ ರಿಂದ ದಿ. ೫ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಹಂಚಿನಾಳ ಮಠದ ಒರಮ ಪೂಜ್ಯ ಈಶ್ವರ ಸ್ವಾಮಿಜಿ ಇವರು ಕಾಗವಾಡದ ಪಟ್ಟಣ ಪಂಚಾಯತಿಯ ಸಭಾಭವನದಲ್ಲಿ ಜನೇವರಿ ೫ ರಿಂದ ನಿರಂತರವಾಗಿ ಸಂಜೆ ಪ್ರವಚನ ನೀಡಿ ಗ್ರಾಮ ಜನರಿಗೆ ಆಧ್ಯಾತ್ಮಿಕ ಪ್ರಬೋಧನ ಮಾಡಿದರು. ಬಳಿಕ ಮೂರು ದಿನಗಳ ಕಾಲ ಮಲ್ಲಿಕಾರ್ಜುನ ಕ್ರೀಡಾಗಂಣದಲ್ಲಿ ಕಾರ್ಯಕ್ರಮ ಕೈಗೊಂಡಿದ್ದರು.

ಮಂಗಳವಾರ ಸಂಜೆ ಕಾಗವಾಡದ ಸುಮಂಗಳಯರಿAದ ಅರಶಿನ ಕುಂಕುಮ ಹಾಗೂ ನಮುತ್ತೆöÊದೆಯರಿಗೆ ಉಡಿ ತುಂಬುವುದು ಕಾರ್ಯಕ್ರಮ ಜರುಗಿತು. ಬಳಿಕ ಸಂಜೆ ೫ ರಿಂದ ೮ ಗಂಟೆವರೆಗೆ ಅಧುನಿಕ ಜಗತ್ತಿನಲ್ಲಿ ಪರಿವಾರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ. ಸಮಾರಂಭದ ಸಾನಿಧ್ಯ ವಹಿಸಿದ ಶಿವಾನಂದ ಬ್ರಹನ್ಮಠ ಗದಗ ಜಗದ್ಗರು ಶ್ರೀ ಸದಾಶಿವಾನಂದ ಮಹಾಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡುವಾಗ ಭಾರತೀಯ ಸಂಸ್ಕçತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಮಹಿಳೆಯರ ಸ್ಥಾನ ಮಾನ ಬದಲಾಗಿದೆ ಆದರೆ ಅವರಲ್ಲಿ ಇರುವ ಘನತೆ ಗೌರವದಲ್ಲಿ ಬದಲಾವಣೆಯಾಗಿಲ್ಲ. ವಿದೇಶಗಳಲ್ಲಿರುವ ಹಾಗೂ ಭಾರತೀಯ ಮಹಿಳೆಯರಲ್ಲಿ ಹಾಗೂ ಸಂಸ್ಕೃತಿಯಲ್ಲಿ ಅಜ ಗಜಾಂತರ ಬದಲಾವಣೆ ಇದೆ ನಮ್ಮ ಮಹಿಳೆಯರಿಗೆ ಮಾತೆ ಎಂದು ಕರೆಯುತ್ತೇವೆ ಎಂದರು.

ವಿಜಪೂರ ಜ್ಞಾನಯೋಗ ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮಿಜಿ ಮಾತನಾಡಿ ಶಿವಾನಂದ ಸ್ವಾಮಿಜಿಗಳ ಪ್ರೇರಣೆಯಿಂದ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಹಾಗೂ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಜಿಗಳ ಆರ್ಶಿವಾದದಿಂದ ಕೃಷ್ಣಾ ನದಿ ದಡದಲ್ಲಿ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ದಾಸೋಹ ಪ್ರಾರಂಭವಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಶಿವಾನಂದ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಒಳ್ಳೆಯ ಜೀವನ ಸಾಗಿಸುತ್ತಿದ್ದಾರೆ ಇದು ಸ್ವಾಮಿಜಿಗಳ ಕೃಪೆ ಎಂದುರ.

ಸದಲಗಾ ಮಠದ ಡಾ// ಶ್ರದ್ದಾನಂದ ಸ್ವಾಮಿಜಿಗಳು ಆರ್ಶಿ ವಷನ ನೀಡಿ ಅವರು ಬರೆದ ಎರಡು ಪುಸ್ತಕಗಳು ಬಿಡುಗಡೆ ಮಾಡಿದರು. ಸಮಾರಂಭದ ಸಾನಿಧ್ಯ ಮಾಂಜರಿ ಗ್ರಾಮದ ಬಾಬಾಸಾಹೇಬ ಬಿಸಲೆ ಮಹಾರಾಜ, ಶ್ರದ್ದಾನಂದ ಆಶ್ರಮದ ತಪಸ್ವಿ ಮಾತಾಜಿ ಜಾನಮ್ಮಾತಾಯಿಯವರು, ಶ್ರದ್ದಾನಂದ ಆಶ್ರಮ ಸಾಗನೂರ ಮಠದ ಪಾರ್ವತಮ್ಮ ತಾಯಿಯವರು, ಓಂಕಾರ ಆಶ್ರಮ ಸವದತ್ತಿ ಭ್ರಮರಾಂಭಿಕಾ ಮಾತಾಜಿಯವರು, ಬಳಗಾನೂರ ಮಠದ ಮಂಜುಳಾತಾಯಿಯವರು ಇವರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು ಈ ಎಲ್ಲರು ಅಧುನಿಕ ಜಗತ್ತಿನಲ್ಲಿ ಪರಿವಾರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಬುಧವಾರದಂದು ಬೆಳ್ಳಿಗೆಯಿಂದ ಮಹಾಜಪಯಜ್ಞೆ ಮತ್ತು ಇಪ್ಪತ್ತೊಂದು ಸಾವಿರ ಸಿವಲಿಂಗಗಳಿಗೆ ಮಹಾಪೂಜೆ ಜರುಗಿತು. ಕಾಗವಾಡದಲ್ಲಿ ಹೊಸದಾಗಿ ಕಟ್ಟಿಸುವ ಪ್ರಜಾ ಸಭಾ ಸ್ಥಳದಲ್ಲಿ ೫೦೦೮ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಸ್ವಾಮಿಜಿಗಳ ಸಾನಿಧ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು. ಭಾರತೀಯ ಸಂಸ್ಕೃತಿ ಉತ್ಸವ ಸೇವಾ ಸಮಿತಿ, ಪ್ರವಚನ ಸೇವಾ ಸಮಿತಿ, ಕಾಗವಾಡ, ಕಾಗವಾಡ ಪಟ್ಟಣ ಹಾಗೂ ಸುತ್ತಲಿನ ಸಮಸ್ತ ಭಕ್ತಾದಿಗಳು ಇವರಿಂದ ಕಾರ್ಯಕ್ರಮ ಯಶ್ವಿಸಿಗೊಳಿಸಿದರು.

ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ

Tags:

error: Content is protected !!