ಚಿಕ್ಕೋಡಿ:ಉಮರಾಣಿ, ನಾಗರಮುನ್ನೋಳಿ, ಇಟನಾಳ ಸೇರಿದಂತೆ ಇನ್ನಿತರ ಗ್ರಾಮಗಳ ತೋಟಪಟ್ಟಿಯಲ್ಲಿ ರಾತ್ರಿ ವಿದ್ಯುತ್ ಪೂರೈಕೆ ಕಡಿತ ಮಾಡುವದನ್ನು ಖಂಡಿಸಿ ಉಮರಾಣಿ ಗ್ರಾಮಸ್ಥರು ನಾಗರಮುನ್ನೋಳಿ ವಿದ್ಯುತ್ ವಿತರಣ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಪ್ರಶಾಂತ ಹುಕ್ಕೇರಿ ಮಾತನಾಡಿ ಕಳೆದ ಹತ್ತು ದಿನಗಳಿಂದ ತೋಟಪಟ್ಟಿಗಳಲ್ಲಿ ಸಂಜೆ 6 ರಿಂದ 10 ಗಂಟೆವರೆಗೆ ವಿದ್ಯುತ ಕಡಿತ ಮಾಡಲಾಗುತ್ತಿದೆ. ಹೀಗಾಗಿ ಎಸ್. ಎಸ್ .ಎಲ್. ಸಿ, ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ರಾಜ್ಯ ಸರ್ಕಾರ ಬಡ ರೈತರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಅನೇಕ ಬಾರಿ ಸಮಸ್ಯೆ ತಿಳಿಸಿದರೂ ಸಮಸ್ಯೆ ಪರಿಹರಿಸಿಲ್ಲ .
ಇವತ್ತು ಪ್ರತಿಭಟನೆ ಮಾಡಿದರೂ ಸಹ ನಾಗರಮುನ್ನೋಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಯಾವುದೇ ಅಧಿಕಾರಿ ಇಲ್ಲಿ ಲಭ್ಯವಿಲ್ಲ. ಸಮಸ್ಯೆ ಬಗೆಹರಿಸಿಲ್ಲ ಅಂದ್ರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಗಜಾನನ ದಾನನ್ನವರ ಮಾತನಾಡಿ ನಮ್ಮ ಮಕ್ಕಳು ಪಿಯುಸಿಯಲ್ಲಿ ಓದುತ್ತಿದ್ದು ದಿನಾಲು ಸಂಜೆ ವಿದ್ಯುತ್ ಕಡಿತದಿಂದ ಅಭ್ಯಾಸ ಮಾಡುವುದಕ್ಕೆ ತೊಂದರೆ ಆಗ್ತಾ ಇದೆ. ಹೀಗಾಗಿ ಶೈಕ್ಷಣಿಕವಾಗಿ ಹಾನಿ ಆಗ್ತಾ ಇದೆ. ರಾಜ್ಯ ಸರ್ಕಾರ, ಸಂಬಂಧಿತ ಕೆಇಬಿ ಅಧಿಕಾರಿಗಳು ಗಮನಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಶಿಕಾಂತ ಸನದಿ, ರಾಕೇಶ ಡಬ್ಬಗೋಳ, ಅಜೀತ ಹುಕ್ಕೇರಿ, ಚೇತನ ಹುಕ್ಕೇರಿ ಮನೋಹರ ವಂಟಮುತೆ, ವಿನಾಯಕ ಕಡೆ, ನಾಗು ವಾಳಕೆ, ದುರದುಂಡಿ ಹುಕ್ಕೇರಿ, ಭರಮು ಹುಕ್ಕೇರಿ, ಸುನಿಲ ಪೂಜೇರಿ , ರವಿ ಸನದಿ, ಸಾಗರ ಪೂಜೇರಿ, ಮಲ್ಲು ಕುಠೋಳಿ, ರೂಪೇಶ್ ಕುಠೋಳಿ, ಸಿದ್ದು ಪೂಜೇರಿ, ಸುರೇಶ ಸಣದಿ, ಕುಮಾರ ಧೂಪಾಟ್ಟೆ ಸೇರದಂತೆ ಇನ್ನಿತರ ಉಮರಾಣಿ ಗ್ರಾಮಸ್ಥರು ಉಪಸ್ಥಿತರಿದ್ದರು.