State

ಮೈಕ್ರೋ ಫೈನಾನ್ಸಗಳಿಂದ ಸಾಲಗಾರರ ರಕ್ಷಣೆಗೆ ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಹೊಸ ಕಾನೂನು …

Share

ಮೈಕ್ರೋ ಫೈನಾನ್ಸಗಳಿಂದ ಅಮಾನುಷವಾದ ದೌರ್ಜನ್ಯಯುತವಾದ ಸಾಲ ವಸೂಲಾತಿ ಆಗಬಾರದೆಂದು ಮತ್ತು ಸಾಲಗಾರರ ಗೌರವಕ್ಕೆ ರಕ್ಷಣೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸಗಳಿಂದ ಅಮಾನುಷವಾದ ದೌರ್ಜನ್ಯಯುತವಾದ ಸಾಲ ವಸೂಲಾತಿ ಆಗಬಾರದೆಂದು ಮತ್ತು ಸಾಲಗಾರರ ಗೌರವಕ್ಕೆ ರಕ್ಷಣೆ ಕೊಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈಗಾಗಲೇ ಮಸೂದೆಯನ್ನು ಸುಗ್ರೀವಾಜ್ಞೆಗಾಗಿ ಸಿದ್ಧಪಡಿಸಲಾಗಿದೆ ಎಂದರು.

ಇನ್ನು ಶಾಸಕ ಬಿ.ಆರ್. ಪಾಟೀಲ್ ರಾಜೀರಾಮೆ ಕುರಿತು ಮಾತನಾಡಿದ ಅವರು ಮುಖ್ಯಮಂತ್ರಿಗಳು ಇದಕ್ಕೆ ಈಗಾಗಲೇ ಪ್ರತಿಕ್ರಿಯಿಸಿದ್ದು, ಅವರನ್ನು ಕರೆದು ಮಾತನಾಡುತ್ತೇನೆಂದು ಹೇಳಿದ್ದಾರೆ. ಬಹು ಬೇಗ ಆ ಸಮಸ್ಯೆ ಬಗೆಹರಿಸಲಿದೆ ಎಂದರು.

ಇನ್ನು ಕೇಂದ್ರದ ಬಜೆಟ್ ಕರ್ನಾಟಕಕ್ಕೆ ತುಂಬಾ ನಿರಾಶೆಯನ್ನು ತಂದಿದೆ. ಇದೊಂದು ಬಿಹಾರ ಚುನಾವಣೆಯ ಘೋಷಣಾಪತ್ರವಾಗಿದೆ. ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸವನ್ನು ಕುಂದಿಸುವ ಬಜೆಟ್ ಇದಾಗಿದೆ. ರಾಜ್ಯದಿಂದ ಕೇಂದ್ರ ಕರ ಹೆಚ್ಚಾಗಿ ಭರಿಸಲಾಗುತ್ತದೆ. ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಠರಾವು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಕ್ಷಿಣ ಭಾರತದವರಿಗೆ ಬಜೆಟನಲ್ಲಿ ಭಾರಿ ಅನ್ಯಾಯವಾಗಿದೆ. ಕರ್ನಾಟಕದವರಿಗೆ ಇದು ಕರಾಳವಾದ ಬಜೆಟ್ ಎಂದರು.

ಸಿದ್ಧರಾಮಯ್ಯನವರ ಅವಧಿ ಮುಗಿಯಿತು ಎಂದು ವಿಪಕ್ಷ ನಾಯಕ ಆರ್. ಅಶೋಕ ಟೀಕೆಗೆ ಪ್ರತಿಕ್ರಿಯಿಸಿದ ಅವರು ಸಿಎಂ ಅವರಿಗೆ ಮಂಡೆ ನೋವಿನ ಹಿನ್ನೆಲೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಎರಡು ದಿನ ವಿಶ್ರಾಂತಿ ನಂತರ ಮತ್ತೇ ಸಾರ್ವಜನಿಕ ಜೀವನಕ್ಕೆ ಮರಳಲಿದ್ದಾರೆ ಎಂದರು.

ಇನ್ನು ಗದಗಿನಲ್ಲಿ ನಾಳೆ ಕ್ಯಾಥಲಾಬನ್ನು ಆರಂಭಿಸಲಾಗುವುದು. ಹೃದಯ ಚಿಕಿತ್ಸೆಗಾಗಿ ಬೆಂಗಳೂರು, ಮುಂಬೈಗೆ ಹೋಗಬೇಕಾಗಿತ್ತು. ಆದರೇ ಈಗ ಸೂಕ್ತವಾದ ವ್ಯವಸ್ಥೆಯನ್ನು ಗದಗಿನಲ್ಲಿ ರೂಪುಗೊಳಿಸಲಾಗಿದೆ ಎಂದರು.

Tags:

error: Content is protected !!