State

ಶಾಸಕ ಬಿ.ಆರ್. ಪಾಟೀಲ್ ರಾಜೀನಾಮೆ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಏನಂದ್ರು???

Share

ಶಾಸಕ ಬಿ.ಆರ್. ಪಾಟೀಲ್ ರಾಜೀನಾಮೆ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದು, ಅವರು ಯಾತಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ. ಸಿಎಂ ಜೊತೆ ಅವರು ಮಾತನಾಡಲಿದ್ದಾರೆ ಎಂದಿದ್ದಾರೆ.

ಶಾಸಕ ಬಿ.ಆರ್. ಪಾಟೀಲ್ ರಾಜೀನಾಮೆ ಹಿನ್ನೆಲೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜೀನಾಮೆ ಯಾಕೆ ನೀಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಲ್ಲ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಿದ್ದಾರೆ. ಅದು ಅವರ ವಿವೇಚಣೆಗೆ ಬಿಟ್ಟಿದ್ದು ಎಂದರು.

ಇನ್ನು ನಮ್ಮ ದೇಶ ಕೃಷಿ ಪ್ರದಾನವಾಗಿದೆ. ಅದನ್ನು ಪರಿಗಣಿಸಿ ಕೃಷಿ ಉತ್ಪಾದನೆ ಹೆಚ್ಚಿಸಲು ಮತ್ತು ರೈತರಿಗೆ ಪ್ರೋತ್ಸಾಹದಾಯಕವಾಗಿ ಸಾಲ ಕೊಡದೇ ಕೇಂದ್ರ ಸರ್ಕಾರ ಬಜೆಟನಲ್ಲಿ ರೈತಾಪಿ ವರ್ಗವನ್ನು ನಿರಾಶೆಯನ್ನು ಮೂಡಿಸಿದೆ. ಈ ಬಾರಿಯ ಬಜೆಟ್ 50 ಲಕ್ಷ 68 ಸಾವಿರ ಕೋಟಿಯ ಗಾತ್ರದ್ದಾಗಿದೆ. ಕಳೆದ ವರ್ಷಕ್ಕಿಂತ ದೊಡ್ಡದಾಗಿದೆ. ಆದರೇ, ಇದರಲ್ಲಿ 15 ಲಕ್ಷ ಕೋಟಿ ಸಾಲವಿದೆ. ಇದನ್ನು ತೀರಿಸಲು ಕ್ರಮಕೈಗೊಂಡಂತಿದೆ. ಇದು ದೇಶಕ್ಕೆ ಉತ್ತೇಜನಕಾರಿಯಾದ ಬಜೆಟ ಅಲ್ಲ ಎಂದರು.

Tags:

error: Content is protected !!