ವಿಜಯಪುರ ರೈಲ್ವೆ ನಿಲ್ದಾಣವನ್ನು ‘ಅಮೃತ್ ಭಾರತ್ ಯೋಜನೆಯಡಿ’ ಕೈಗೆತ್ತಿಕೊಂಡು ಅಭಿವೃದ್ಧಿಗೊಳಿಸಬೇಕೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದ್ದರು. ಕಳೆದ ಜುಲೈ 2024 ರಲ್ಲಿ ನಾವು ರೈಲ್ವೆ (ರಾಜ್ಯ) ಸಚಿವರಾದ ವಿ.ಸೋಮಣ್ಣ ಅವರಿಗೆ ಪತ್ರ ಬರೆದು, ವಿಜಯಪುರ ರೈಲ್ವೆ ನಿಲ್ದಾಣವನ್ನು ‘ಅಮೃತ್ ಭಾರತ್ ಯೋಜನೆಯಡಿ’ ಕೈಗೆತ್ತಿಕೊಂಡು ಅಭಿವೃದ್ಧಿಗೊಳಿಸಬೇಕೆಂದು ಮನವಿ ಮಾಡಿದ್ದರು.
ಉತ್ತರ ಕರ್ನಾಟಕದ ವಿಜಯಪುರ, ಕಲ್ಬುರ್ಗಿ, ಬಾಗಲಕೋಟೆ, ಗದಗ, ಕೊಪ್ಪಳ, ಬೆಳಗಾವಿ, ಬೀದರ್, ಆಲಮಟ್ಟಿ ಸೇರಿದಂತೆ 61 ರೈಲ್ವೆ ಸ್ಟೇಷನ್ ಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಪತ್ರವನ್ನು ಷೇರ್ ಮಾಡಿದ್ದಾರೆ.