ಬೆಳಗಾವಿ : ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೇಯರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿ ಮುದ್ರಣ ಮಾಧ್ಯಮ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಬೆಳಗಾವಿಯ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಮೇಯರ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ಅಭಯ್ ಪಾಟೀಲ ಹಾಗೂ ಆಸೀಫ್ ಸೇಠ್ ಉದ್ಘಾಟಿಸಿದ್ದರು.
ಸತತ ಎರಡು ಮ್ಯಾಚ್ ಗೆದ್ದು ಪೈನಲ್ ತಲುಪಿದ್ದ ಮುದ್ರಣ ಮಾಧ್ಯಮ ತಂಡ ಕಾರ್ಪೋರೇಷನ್ ಸಿಬ್ಬಂದಿ ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಪಂದ್ಯ ಗೆದ್ದು ಕಪ್ ಗೆಲ್ಲುವಲ್ಲಿ ಮುದ್ರಣ ಮಾಧ್ಯಮ ತಂಡ ಯಶಸ್ವಿಯಾಗಿದೆ.