raybag

ರಾಯಬಾಗ: ಬ್ರಹ್ಮಕುಮಾರಿ ಈಶ್ವರಿಯ ವಿ ವಿ ಯಿಂದ ಮಹಾಶಿವರಾತ್ರಿ ಹಾಗೂ ರೈತ ಚಿಂತನ ಮಂಥನ

Share

ರಾಯಬಾಗ : ವಿಶ್ವ ಪರಿವರ್ತನೆಗಾಗಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಮಹೋತ್ಸವದ ಎರಡನೆಯ ದಿನ ರೈತ ಚಿಂತನ ಮಂಥನ ಕಾರ್ಯಕ್ರಮ ಜರುಗಿತು.

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಶ್ವ ಪರಿವರ್ತನೆಗಾಗಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಮಹೋತ್ಸವದ ಎರಡನೆಯ ದಿನ ರೈತ ಚಿಂತನ ಮಂಥನ ಕಾರ್ಯಕ್ರಮ ಜರಗಿತು. ಮೊದಲಿಗೆ ಅಕ್ಕಂದಿರು ಹಾಗೂ ಅತಿಥಿಗಳಿಂದ 15ಅಡಿ ಎತ್ತರದ ಶಿವಲಿಂಗ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳ ಪೂಜೆ ನೆರವೇರಿಸಿದರು.

ವೇದಿಕೆ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಆಶು ಕವಿ ಸಿದ್ದಣ್ಣ ಬಿದರಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಜಗತ್ತಿಗೆ ದೈವ, ನಂಬಿಕಯೆ ದೇವರು ಆಗಿದ್ದಾನೆ. ನಾವು ಹಣ್ಣಿನಲ್ಲಿ ರುಚಿ ಇದೆ ಎಂದು ನಂಬೆವು ಮಣ್ಣಿನಲ್ಲಿ ಅನ್ನ ಇದೆ ಎಂದು ನಂಬೆವು ಅದಕ್ಕೆ ನಂಬಿಕೆಯೇ ದೇವರಾಗಿದ್ದಾನೆ ಎಂದು ಹೇಳುತ್ತಾ ನೀತಿ ಸಂಸ್ಕಾರದ ಮಾತುಗಳನ್ನಾಡಿದರು.

ನಂತರ ಜ್ಯೋತಿ ಅಕ್ಕನವರು ಮಾತನಾಡಿ ದೇಶ ಸಮೃದ್ಧವಾಗಬೇಕಾದರೆ, ಮೌಲ್ಯ ಭರಿತವಾಗಿರಬೇಕು ಮತ್ತು ಶಕ್ತಿಶಾಲಿ ಆಗಬೇಕೆಂದರೆ ಒಬ್ಬ ರೈತ ಒಬ್ಬ ಶಿಕ್ಷಕ ಒಬ್ಬ ಸೈನಿಕ ಎಂಬ ಮೂರು ಆಧಾರ ಸ್ಥಂಭಗಳು ಬಹಳ ಅವಶ್ಯಕವಾಗಿವೆ . ಒಂದು ಸಮಯ ಇತ್ತು, ರೈತನಲ್ಲಿ ಅಪಾರ ಶಕ್ತಿ ಇತ್ತು ಯಾಕೆಂದ್ರೆ ಭೂಮಿಯನ್ನು ತಾಯಿ ಎಂದು ತಿಳಿದು ದುಡಿಯುತ್ತಿದ್ದ ಅದಕ್ಕಾಗಿ ಹೇಳುತ್ತಾರೆ ಬೆಳಗಾಗಿ ಎದ್ದು ಯಾರನ್ನು ನೆನೆಯಲಿ ಎಳ್ಳು ಜೀರಿಗೆ ಕೊಡುವ ಭೂಮಿ ಕಾರ್ಯ ನೆನೆಯಲಿ ಎಂದು ಹೇಳಿದರು. ಚಿಕ್ಕೋಡಿಯ ಶಾಂತಾ ಅಕ್ಕನವರು ಆಧುನಿಕ ರಾಸಾಯನಿಕ ಕೃಷಿ ಹಾಗೂ ಕ್ಷೀರ ಕ್ರಾಂತಿಯ ಪರಿಣಾಮ ತಿಳಿದರು. ಕಾರ್ಯಕ್ರಮದಲ್ಲಿ ಶಿವರಾಯ ಯಲ್ಲಡಗಿ, ಶ್ರೀಶೈಲ ದರೂರೆ, ಶೇಖರ ದಳವಾಯಿ, ಶ್ರೀಮಂತ ನಾಯಿಕ, ಶೀತಲ ಲೋಹಾರ, ಇತರರು ಉಪಸ್ಥಿತರಿದ್ದರು

Tags:

error: Content is protected !!