ಕಳೆದ ಎಂಟು ತಿಂಗಳಿನಿಂದ ಮೆಂಡಿಲ್ ಗ್ರಾಮದಲ್ಲಿ ಸೌರ ವಿದ್ಯುತ್ ಸರಬರಾಜು ವ್ಯತ್ಯಯ ಗೊಂಡಿದ್ದು,ಖಾನಾಪೂರ ತಾಲೂಕಿನ ಮೆಂಡಿಲ್ ಗ್ರಾಮಸ್ಥರು ಕಳೆದ ಎಂಟು ತಿಂಗಳಿನಿಂದ ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಹೆಸ್ಕಾಂ ಸಮಸ್ಯೆ ನಿವಾರಣೆ ಮಾಡುವುದರಲ್ಲಿ ವಿಫಲವಾಗಿದೆ. ಇದರಿಂದ ಬೇಸತ್ತು ಮೆಂಡಿಲ್ ಗ್ರಾಮಸ್ಥರು ಖಾನಾಪೂರ ಹೆಸ್ಕಾಂ ಇಲಾಖೆಯ ಕಚೇರಿಗೆ ಭೇಟಿ ನೀಡಿ,
ತಮ್ಮ ಸಮಸ್ಯೆಯನ್ನು ಬರುವ ಶನಿವಾರದೊಳಗೆ ನಮ್ಮ ಪರಿಹರಿಸಿ ಸೌರ ವಿದ್ಯುತ್ ಸರಿಯಾಗಿ ಪೂರೈಕೆಗೆ ಆಗದಿದ್ರೆ ಹೆಸ್ಕಾಂ ಇಲಾಖೆಯ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಹೆಸ್ಕಾಂ ಅಧಿಕಾರಿಗಳು ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಿರೋಲಿ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಗವಾಸ್ಕರ್, ನಾಮದೇವ ಪಾಟೀಲ್,ಶಾಬಾ ಮಲಿಕ್, ಜಯರಾಂ ಪಾಟೀಲ್,ವಿಜಯ ಮಾದಾರ ಸೇರಿದಂತೆ ಮೆಂಡಿಲ್ ಗ್ರಾಮಸ್ಥರು ಭಾಗಿದ್ಧರು.