Kagawad

ಕಾಗವಾಡ ವಿದ್ಯುತ್ ವ್ಯತ್ಯಯ ಶಾಸಕ ಕಾಗೆ ಅಸಮಾಧಾನ

Share

ಕಾಗವಾಡ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಯಲ್ಲಿ ವ್ಯಕ್ತಿಯ ಉಂಟಾಗುತ್ತಿದ್ದು ಸಾರ್ವಜನಿಕರಿಗೆ ತೀರಾ ತೊಂದರೆ ಆಗುತ್ತಿದೆ ಸಮಸ್ಯೆಯನ್ನು ಬೇಗನೆ ಪರಿಹರಿಸದಿದ್ದರೆ ಹುಬ್ಬಳ್ಳಿಹೆಸ್ಕಾಂ ಎದುರು ಪ್ರತಿಭಟನೆ ಮಾಡುತ್ತೇನೆಂದು ಕಾಗವಾಡ ಶಾಸಕ ರಾಜು ಕಾಗೆ ಎಚ್ಚರಿಕೆ ನೀಡಿದ್ದಾರೆ.

ಕಾಗವಾಡ ಮತ ಕ್ಷೇತ್ರದಲ್ಲಿ ವಿದ್ಯುತ ಪುರೈಕೆಯಲ್ಲಿ ವೆತ್ತೆಯವಾಗುತ್ತಿದ್ದರನ್ನ ರೈತರು ಸಾರ್ವಜನಿಕರು ರೊಚ್ಚಿಗೆದ್ದಿದ್ದು ವಿದ್ಯುತ್ ಸರಿಪಡಿಸಲು ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ನಿರುತರಾಗಿದ್ದಾರೆ. ಹೆಸ್ಕಾಂ ಇಲಾಖೆಯ ಹುಬ್ಬಳ್ಳಿ ಎಂಡಿ ಇವರನ್ನು ಸಂಪರ್ಕಿಸಲು 10 ಸಲ ಮೊಬೈಲ್ ಕರೆ ಮಾಡಿದರು ನನ್ನ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ನಾನು ರೈತರೊಂದಿಗೆ ಹುಬ್ಬಳ್ಳಿ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳುತ್ತೇನೆ ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಖಾರವಾಗಿ ಮಾತನಾಡುವಾಗ ಹೇಳಿದರು.

ಶುಕ್ರವಾರ ರಂದು ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದ ಎರಡನೆಯ ಅಂತಸ್ಥರ ಕಟ್ಟಡಕ್ಕೆ ಭೂಮಿ ಪೂಜಿ ಸಲ್ಲಿಸಿ ಶಾಸಕ ಇನ್ನೂ ವಾಹಿನಿ ದೊಂದಿಗೆ ಮಾತನಾಡುವಾಗ ತಮ್ಮ ರೋಷವನ್ನು ಹೊರ ಹಾಕಿದರು. ವಿದ್ಯುತ್ ಇಲಾಖೆ ಪ್ರತಿದಿನೈ ಬೆಳಿಗ್ಗೆ ಹಾಗೂ ಸಂಜೆ ಸುಮಾರು 3:00 ಕಾಲ ವಿದ್ಯುತ್ ಪೂರೈಕೆ ತೆಗೆದುಕೊಳ್ಳುತ್ತಿದ್ದಾರೆ ಇದರಿಂದ ವಿದ್ಯಾರ್ಥಿಗಳಿಗೆ ಬೆಳಗಿನ ಅಧ್ಯಯನ ಮಾಡುವುದು ಇನ್ನಿತರ ದಿನ ನಿತ್ಯದ ಕಾರ್ಯದಲ್ಲಿ ಜನರು ತೊಡಗುತ್ತಿದ್ದಾರೆ ಅಲ್ಲದೆ ಈ ಮೊದಲು ದೀಪದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು ಈಗ ಪ್ರತಿಯೊಬ್ಬರ ಮನೆಯಲ್ಲಿ ವಿದ್ಯುತ್ ಪೂರೈಕೆ ಇದ್ದಿದ್ದರಿಂದ ಆ ವ್ಯವಸ್ಥೆ ಕಡಿತ ಗೊಂಡಿದೆ ಇದರಿಂದ ಇಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಸ್ಥಳೀಯ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ವಿಚಾರಿಸಿದಾಗ ಮೇಲಿಂದ ಆದೇಶವಿದ್ದು ಇದರ ಪಾಲನೆ ನಾವು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಈ ಬಗ್ಗೆ ಸಮಸ್ಯೆಗಳ ಕುರಿತು ವಿಚಾರಣೆ ಮಾಡಲು ಹೆಸ್ಕಾಂ ಇಲಾಖೆ ಎಮ್ ಡಿ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ರೈತರ ಬೆಳೆಗಳು ಕಮರಿ ಹೋಗುತ್ತಿದ್ದು ವಿದ್ಯುತ್ ಪೂರೈಕೆಯಿಂದ ನೀರು ಪೂರೈಕೆಯಲ್ಲಿ ವ್ಯತ್ಯವಾಗುತ್ತಿದೆ.

ಬೆಸ್ಕಾಂ ಇಲಾಖೆ ದವರು ಪ್ರತಿಯೊಂದು ವಾರದಲ್ಲಿ ಭಾನುವಾರ ರಂದು ಸಂಪೂರ್ಣ ದಿನ ವಿದ್ಯುತ್ ಪುರೈಕೆ ತೆಗಿತಿಗೊಳಿಸಿ ಇನ್ನು ಆರು ದಿನಗಳಲ್ಲಿ ಅದನ್ನು ಬಳಸಿಕೊಳ್ಳಬೇಕು ಇಂಥ ಸಲಹೆ ನಾನು ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅಧಿಕಾರಿಗಳಿಗೆ ಸಲಹೆ ನೀಡಿದ್ದೇವೆ ಇದನ್ನು ಗಮನದಲ್ಲಿ ತೆಗೆದುಕೊಂಡು ವ್ಯತ್ಯವಾಗುತ್ತಿರುವ ವಿದ್ಯುತ್ ಪೂರೈಕೆ ಸುಧಾರಣೆಗೊಳಿಸಬೇಕು. ಇರುವುದರಿಂದ ರೈತರ ಪರ ನಾವು ನಿಂತು ಹೆಸ್ಕಾಂ ಇಲಾಖೆಯ ಹುಬ್ಬಳ್ಳಿ ಕಚೇರಿ ಎದರು ಪ್ರತಿಭಟನೆ ಕೈಗೊಳ್ಳುತ್ತೇನೆ ಎಂದು ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಸಾರಿಗೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ರಾಜು ಕಾಗೆ ಹೇಳಿದರು.

ಸನ್ಮತಿ ಶಿಕ್ಷಣ ಸಮಿತಿಯಲ್ಲಿ ಸುಮಾರು 63 ಲಕ್ಷ ದ ಕಟ್ಟಡದ ಭೂಮಿ ಪೂಜೆ ನೆರವೇರಿತು. ಶಿಕ್ಷಣ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಗು ಮೂಡೆ, ವಸಂತ ಖೂತ, ಆರ್ ವಿ ಸಂಗೋರಾಮ, ಅಜಿತ ನಾಂದರೆ, ಸನ್ಮತಿ ಪಾಟೀಲ, ಅಶ್ವತ್ ಕುಮಾರ ಪಾಟೀಲ, ಕುಮಾರ ಮಲಗಾವೆ, ರಾಹುಲ ಸೌದತ್ತಿ ವಿನೋದ ಚೌಗುಲೆ, ಪ್ರಾಚಾರ್ಯ ಬಾಹುಬಲಿ ಬನಿಜವಾಡ ನೇಮಿನಾಥ್ ಘೆಸಾಪಗೋಳ, ಭರತ ನಾಂದರೆ, ಸಂಸ್ಥೆ ಕಾರ್ಯದರ್ಶಿ ಸತೀಶ್ ಪಾಟೀಲ ವಿದ್ಯಾಲಯದ ಮುಖ್ಯವಾದಕ್ಕೆ ಎಂ ಎನ ಕಾಳೆನಟ್ಟಿ ಸೇರಿದಂತೆ ಅನೇಕರು ಇದ್ದರು.

ಸುಕುಮಾರ ಬನ್ನೂರೆ
ಇನ ನ್ಯೂಸ್ ಕಾಗವಾಡ

Tags:

error: Content is protected !!