hubbali

ಕೇಶ್ವಾಪುರ ಪೊಲೀಸರ್ ಭರ್ಜರಿ ಕಾರ್ಯಾಚಾರಣೆ : ದಾಖಲೆಗಳು ಇಲ್ಲದ 89 ಲಕ್ಷ ಹಣ ಸೀಜ್

Share

ಕೇಶ್ವಾಪುರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ದಾಖಲೆಗಳು ಇಲ್ಲದೆ ಸಾಗಾಟ ಮಾಡುತ್ತಿದ್ದ 89 ಲಕ್ಷ ಹಣವನ್ನು ಖಚಿತ ಮಾಹಿತಿ ಮೇರೆಗೆ ದಾಳಿಯನ್ನು 89 ಲಕ್ಷ ಹಣವನ್ನು ಸೀಜ್ ಮಾಡಿ ನಾಲ್ವರ್ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ಹುಬ್ಬಳ್ಳಿಯ ಕ್ಲಬ್ ರೋಡ್ ಬಳಿಯಲ್ಲಿ ರವಿವಾರ ಬ್ಯಾಗ್ ಒಂದರಲ್ಲಿ 89 ಲಕ್ಷ ಹಣ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿಯನ್ನು ಮಾಡಿದಾಗ 500 ರೂ ಮುಖಬೆಲೆಯ 89 ಲಕ್ಷ ಹಣ ಸಿಕ್ಕಿದೆ.ನಿವೃತ್ತ ನೌಕರರಾದ ಪಾಂಡುರಂಗಪ್ಪ,ಕಮಲಾ ಹಾಗೂ ಬಾಲಕೃಷ್ಣ ಎಂಬುವರು ಶಿವಮೊಗ್ಗದಿಂದ ಹಣ ತಂದಿದ್ರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ನಗರದ ಮಹಿಳಾ ಕಾರ್ಪೊರೇಟರ್ ಪತಿ ಸತೀಶ್ ಶೇಜವಾಡಕರ್ ಅವರಿಗೆ ಸೇರಿದ ಹಣ ಎನ್ನಲಾಗುತ್ತಿದೆ.ಇದೊಂದು ಗಂಭೀರ ಪ್ರಕರಣ ಆಗಿರುವ ಕಾರಣ ಒಟ್ಟು ನಾಲ್ಕು ಜನರ ಮೇಲೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,ಅಷ್ಟೇ ಅಲ್ಲದೆ IT ಅಧಿಕಾರಿಗಳಿಗೂ ಕೂಡ ಮಾಹಿತಿ ನೀಡಲಾಗಿದೆ ಅಂತಾ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಕೇಶ್ವಾಪುರ ಠಾಣೆಯ ಪೊಲೀಸರು ಈ ದಾಖಲೆ ಇಲ್ಲದ ಹಣ ಎಲ್ಲಿಂದ ಬಂತು,ಇದು ಹವಾಲ್ ಹಣವಾ,ಇಷ್ಟು ಹಣ ಇವರ ಬಳಿ ಹೇಗೆ ಬಂತು ಎಂಬೆಲ್ಲಾ ಮಾಹಿತಿಯನ್ನು ಇದೀಗ ಕಲೆ ಹಾಕುತ್ತಿದ್ದಾರೆ.

Tags:

error: Content is protected !!