ಹುಕ್ಕೇರಿ : ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಶಾಖೆ ಬೆಳಗಾವಿ ಉಪಾದ್ಯಕ್ಷರಾಗಿ ಡಾ, ಶಾಂತಾರಾಮ ಬಾಗೆವಾಡಿ ಆಯ್ಕೆಯಾದರು.
ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳ ಆಯ್ಕೆಗೆ ಜರುಗಿದ ಚುನಾವಣೆಯಲ್ಲಿ ಅದ್ಯಕ್ಷರಾಗಿ ಡಾ, ಸಂಜಯ ಸಿದ್ದಣ್ಣವರ,ಉಪಾದ್ಯಕ್ಷರಾಗಿ ಡಾ, ಶಾಂತಾರಾಮ ಬಾಗೆವಾಡಿ ಹಾಗೂ ಖಜಾಂಚಿ ಸ್ಥಾನಕ್ಕೆ ಡಾ, ಸಚೀನ ಶರ್ಮಾ ಬಹುಮತಗಳಿಂದ ಆಯ್ಕೆಯಾದರು.
ಚುನಾವಣೆ ಅಧಿಕಾರಿಗಳಾದ ಡಾ, ಎಸ್ ವಿ ಮುನ್ಯಾಳ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು. ಇಂದು ಸಂಕೇಶ್ವರ ನಗರದ ನಿಖಿಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಉಪಾದ್ಯಕ್ಷ ಸ್ಥಾನಕ್ಕೆ ಚುನಾಯಿತರಾದ ಡಾ, ಶಾಂತಾರಾಮ ಬಾಗೆವಾಡಿಯವರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಂತಾರಾಮ ಈ ನನ್ನ ಗೆಲುವಿಗೆ ಸಹಕರಿಸಿದ ಬೆಳಗಾವಿ ಜಿಲ್ಲಾ ಸರಕಾರಿ ವೈದ್ಯರುಗಳಿಗೆ ಮತ್ತು ಪರೋಕ್ಷ ಅಪರೋಕ್ಷ ವಾಗಿ ಸಹಾಯ ಸಹಕಾರ ಮಾಡಿದ ಎಲ್ಲ ನನ್ನ ಹಿತೈಷಿಗಳಿಗೆ ನಾನು ಖುಣಿಯಾಗಿದ್ದೆನೆ ಬರುವ ದಿನಗಳಲ್ಲಿ ಸರಕಾರಿ ವೈದ್ಯರುಗಳ ದ್ವನಿಯಾಗಿ ಕೇಲಸ ಮಾಡುತ್ತೆನೆ ಎಂದರು
ಈ ಸಂದರ್ಭದಲ್ಲಿ ನವೀನ ಗಂಗರೆಡ್ಡಿ, ನ್ಯಾಯವಾದಿ ಕಾಡಪ್ಪ ಕುರಬೆಟ, ಆರೋಗ್ಯ ಇಲಾಖೆ ಸಿಬ್ಬಂದಿ ಸಂತೋಷ ಪಾಟೀಲ, ವಿಜಯ ಕುಂಬಾರ,ದಯಾನಂದ ತೇಗೂರ, ರವಿ ಹಾಲಗಡಗಿ, ಎಚ್ ಹರೀಶ, ಕಾಶಿನಾಥ ಕರಾಳೆ, ಮಹಾವೀರ ಚೌಗಲಾ, ಮಧು ಕರನಿಂಗ, ಗೌತಮ್ ಷಾ, ದಯಾನಂದ ಢಂಗೆ, ಮೌಲಾಜಿ ಖಂದಾಳೆ, ಅಸಲಂ ಮುಲ್ತಾನಿ, ಸೌರಭ ಮಾಳಂಕ ಮೊದಲಾದ ನಿಖಿಲ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.