Banglore

ಮುಡಾದಲ್ಲಿ ಸಿಎಂ ಗೆ ರಿಲೀಫ್… ಮೂರನೇ ಏಜೆನ್ಸಿಗೆ ತನಿಖೆಗಿಲ್ಲ ಅವಕಾಶ ; ಡಿ.ಕೆ.ಶಿವಕುಮಾರ್

Share

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನಾಯ್ಯಾಲಯವು ತನ್ನ ತೀರ್ಪನ್ನು ನೀಡಿದೆ. ಇನ್ನೊಂದೆಡೆ ಈ ಪ್ರಕರಣವನ್ನು ಮೂರನೇ ತನಿಖಾ ಏಜೆನ್ಸಿಗೆ ನೀಡಲು ಅವಕಾಶವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಅಲ್ಲದೇ ಗೃಹ ಸಚಿವ ಜಿ. ಪರಮೇಶ್ವರ ಅವರು ವಿಪಕ್ಷಿಯರ ಪ್ರತಿಭಟನೆಗಳಿಗೆ ನ್ಯಾಯಾಲಯವು ಉತ್ತರ ನೀಡಿದೆ ಎಂದಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಡಾ ಪ್ರಕರಣದ ತನಿಖೆಯನ್ನು ಎರಡು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಹೀಗಿರುವಾಗ ಮೂರನೇ ಏಜೆನ್ಸಿಗೆ ಯಾಕೆ ನೀಡುತ್ತಾರೆ? ಈಗಾಗಲೇ ನಾನು ನನ್ನ ಮೇಲಿನ ಕೇಸಗಳು ಸರಿಯಾಗಿಲ್ಲವೆಂದು ಹೊಡೆದಾಡುತ್ತಿದ್ದೇನೆ. ತನಿಖೆಯನ್ನು ಮೂರನೇ ಸಂಸ್ಥೆಗೆ ನೀಡಲು ಅವಕಾಶವಿಲ್ಲ ಎಂದಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ ಅವರು ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸವಿರುವುದರಿಂದ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದೆ. ವಿಪಕ್ಷಿಯರು ಮಾಡಿದ ಪ್ರತಿಭಟನೆ ಹೋರಾಟಗಳಿಗೆ ನ್ಯಾಯಾಲಯ ಉತ್ತರ ನೀಡಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟನಲ್ಲಿ ಆಗುವ ತೀರ್ಮಾಣಗಳು ನ್ಯಾಯಯುತವಾಗಿರುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದರು.

Tags:

error: Content is protected !!