ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳ್ಳಿಗ್ಗೆ ಪೊಲೀಸರ ಗನ್ ಸದ್ದು ಮಾಡಿದ್ದು ಹುಬ್ಬಳ್ಳಿಯ ರಿಂಗ್ ರೋಡ್ ನಲ್ಲಿ ರಾಬರಿ,ನವನಗರ ಎಪಿಎಂಸಿ ಯಲ್ಲಿ ಅಂಗಡಿ ಹಾಗೂ ಗಬ್ಬುರಿನಲ್ಲಿನ ಜೈನ ಮಂದಿರದಲ್ಲಿ ಕಳ್ಳತನ ಮಾಡಿದ್ದ ನಟೋರಿಯಸ್ ಅಂತಾರಾಜ್ಯ ದರೋಡೆಕೋರರ ಮೇಲೆ ಖಾಕಿ ಪೈರಿಂಗ್ ಮಾಡಿ ಇಬ್ಬರನ್ನು ಬಂಧನ ಮಾಡಲಾಗಿದೆ.
ನಿನ್ನೇ ರಾತ್ರಿ ರಿಂಗ್ ರೋಡ್’ನಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಸವಾರರನ್ನು ದರೋಡೆ ಮಾಡಿದ ಮಾಹಿತಿ ತಿಳಿಯುತ್ತಿದ್ದ ಹಾಗೆ ಅಲರ್ಟ್ ಆದ ಪೊಲೀಸರು ವಿವಿಧ ಪ್ರದೇಶಗಳಲ್ಲಿ ನಾಕಾ ಬಂದಿಹಾಕಿ ಪರಿಶೀಲನೆ ನಡೆಸುತ್ತಿದ್ದಾಗ ಐದಾರು ಜನರಿಂದ ದರೋಡೆಕೋರರು ವಾಹನ ನಿಲ್ಲಿಸದೇ ಬ್ಯಾರೀಕೆಡ್ ಜಕಂ ಮಾಡಿ ಎಸ್ಕೇಪ್ ಆಗಿದ್ದಾರೆ.
ಕೂಡಲೇ ಕಾರ್ಯಪ್ರವತ್ತರಾದ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ ದರೋಡೆಕೋರರು ರಿಂಗ್ ರೋಡ್ ಬಳಿಯ ಕಡಪಟ್ಟಿ ಹಳಿಯಾಳ ರಸ್ತೆಯ ಬಳಿ ಆರೋಪಿಗಳು ಇರೋ ಮಾಹಿತಿ ತಿಳಿದು ಬಂಧನ ಮಾಡಲು ಹೋದಾಗ ಪೊಲೀಸರ್ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪೊಲೀಸರು ಆತ್ಮರಕ್ಷಣೆಗಾಗಿ ದರೋಡೆಕೋರರ ಮೇಲೆ ಪೈರಿಂಗ್ ಮಾಡಿದಾಗ ಇಬ್ಬರ ಕಾಲಿಗೆ ಗುಂಡೇಟು ಬಿದ್ದಿದೆ.
ಸದ್ಯ ಈ ಆರೋಪಿಗಳು ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆ ಕಳ್ಳತನ ಮಾಡಿದ ಮಾಹಿತಿ ಇದ್ದು ಇದು ನಟೋರಿಯಸ್ ಚಾದರ್ ಹಾಗೂ ಚಡ್ಡಿ ಗ್ಯಾಂಗ್ ಅಂತಾ ಸದ್ಯಕ್ಕೆ ತಿಳಿದು ಬಂದಿದೆ.