ಪೂಜ್ಯರು ಎಲ್ಲ ಸ್ವಾಮಿಜೀಗಳ ಹಾಗೆ ರಾಜಕೀಯ ಪ್ರಚಾರಗಳಿಗೆ ಬರಬಾರದು. ನಮ್ಮ ಹಣೆಬರಹದಲ್ಲಿ ಇದ್ದರೆ ನಮ್ಮನ್ನ ಮತದಾರರು ಆಯ್ಕೆ ಮಾಡ್ತಾರೆ ಎಂದು ರೆಡ್ಡಿ ಗುರುಪೀಠದ ವೇಮಾನಂದ್ ಶ್ರೀಗಳಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಮನವಿ ಮಾಡಿದ್ದಾರೆ.
ಇಳಕಲ್ ತಾಲೂಕಿನ ಗೋನಾಳ ಎಸ್ ಟಿ ಗ್ರಾಮದಲ್ಲಿ ಹೇಮ-ವೇಮ ಸಮಾಜ ಅಭಿವೃದ್ಧಿ ಸಮಾವೇಶದಲ್ಲಿ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮನ ನೂತನ ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೂಜ್ಯರು ಎಲ್ಲ ಸ್ವಾಮಿಜೀಗಳ ಹಾಗೆ ರಾಜಕೀಯ ಪ್ರಚಾರಗಳಿಗೆ ಬರಬಾರದು. ನನ್ನ ಚುನಾವಣಾ ಪ್ರಚಾರಕ್ಕೂ ಬರಬೇಡಿ, ಇದು ನನ್ನ ಕಳಕಳಿಯ ಮನವಿ. ಸ್ವಜಾತಿ ಪ್ರೇಮ ಬೇಡ,ಸಮಾಜ ತಿದ್ದುವ ಕಾರ್ಯ ಶ್ರೀಗಳಿಂದ ನಡೆಯಲಿ. ನಮ್ಮ ಹಣೆಬರಹದಲ್ಲಿ ಇದ್ದರೆ ನಮ್ಮನ್ನ ಮತದಾರರು ಆಯ್ಕೆ ಮಾಡ್ತಾರೆ.