Athani

ಯಾವುದೆ ಹುರುಳಿಲ್ಲದ ಕೇಸ್ ಗೆ ಹೈಕೋರ್ಟ್ ತಕ್ಕ ಉತ್ತರ ನೀಡಿದೆ ;ಶಾಸಕ ಲಕ್ಷ್ಮಣ ಸವದಿ

Share

ಅಥಣಿ: ಸಿಎಂ ಸಿದ್ದರಾಮಯ್ಯ ಅವರ ಮೇಲಿನ ಮೂಡ ಹಗರಣ ವಿಚಾರವಾಗಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ ಕೇಸ್ ಗೆ ಮಹತ್ವದ ಆದೇಶ ಬಂದಿದ್ದು ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದೆ.

ಹೈಕೋರ್ಟ್ ಆದೇಶ ವಿಚಾರವಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದ್ದು ಸಂತಸ ವ್ಯಕ್ತ ಪಡಿಸಿದ್ದಾರೆ. ಅವರು ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತ, ನ್ಯಾಯಾಲಯದ ಆದೇಶ ಸಂತಸ ತಂದಿದೆ. ಸಿಎಂ ಅವರಿಗೆ ನ್ಯಾಲಯದ ಆದೇಶದ ಮೇಲೆ ಅಪಾರ ನಂಬಿಕೆ ಇತ್ತು ಇಂದು ನ್ಯಾಯಾಲಯ ನೀಡಿದ ಆದೇಶವನ್ನ ನಾವೆಲ್ಲರೂ ಸಂತೋಷದಿಂದ ಸ್ವೀಕರಿಸುತ್ತೇವೆ.

ಯಾವುದೆ ಹುರುಳಿಲ್ಲದ ಕೇಸ್ ಗಳನ್ನ ದಾಖಲು ಮಾಡಿ ಜನರ ದಿಕ್ಕು ತಪ್ಪಿಸುತ್ತಿರುವಂತವರಿಗೆ ನ್ಯಾಯಾಲಯದ ಆದೇಶ ತಕ್ಕ ಉತ್ತರ ನೀಡಿದೆ ಈ ಆದೇಶದಿಂದ ಮತ್ತೆ ಸತ್ಯ ಮೇವ ಜಯತೆ ಅನ್ನುವ ಘೋಷ ವಾಕ್ಯ ಪುನಃ ಸಾಬಿತಾಗಿದೆ ಎಂದು ವಿರೋದ್ದ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Tags:

error: Content is protected !!