Banglore

ಸಾಲಗಾರರಿಗೆ ಕಾಟ ಕೊಟ್ಟರೇ ಕಠಿಣ ಕ್ರಮ..!!!

Share

ಸಾಲಗಾರರಿಗೆ ಮೈಕ್ರೋ ಫೈನಾನ್ಸನವರು ಕಿರುಕುಳ ನೀಡಿದ್ರೇ ಕಠಿಣ ಕ್ರಮವನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ಈ ಹಿಂದೆ ಕಾಟ ಕೊಟ್ಟರೇ ನೀಡುತ್ತಿದ್ದ ಶಿಕ್ಷೆಯ ಪ್ರಮಾಣವನ್ನು 3 ರಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗ್ರಾಹಕರಿಗೆ ಕಾಟ ಕೊಡುವ ಫೈನಾನ್ಸಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮತ್ತೊಮ್ಮೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿಂದೆ ಕಾಟ ಕೊಟ್ಟರೇ ನೀಡುತ್ತಿದ್ದ ಶಿಕ್ಷೆಯ ಪ್ರಮಾಣವನ್ನು 3 ರಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಕಾನೂನಿನ ಬಿಸಿ ಮುಟ್ಟಿಸಲು ಸರ್ಕಾರ ಕ್ರಮಕೈಗೊಂಡಿದೆ. ಈಗಾಗಲೇ ಈ ಕುರಿತು ರಾಜ್ಯಪಾಲರಿಗೆ ಬಿಲ್ ಕಳುಹಿಸಿ ಕೊಟ್ಟಿದ್ದೇವೆ ಎಂದರು.

ಇನ್ನು ಶೀಘ್ರದಲ್ಲೇ ದಲಿತ ಸಚಿವರು ದೆಹಲಿಗೆ ಹೋಗಲಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ನೇತೃತ್ವದಲ್ಲಿ ದೆಹಲಿಗೆ ಹೋಗುತ್ತಿರುವುದು ಗೊತ್ತಿಲ್ಲ. ನಾನು ನನ್ನ ಇಲಾಖೆ ಕೆಲಸಕ್ಕೆಂದು ಹೋಗುತ್ತಿದ್ದೇನೆ ಎಂದಿದ್ದಾರೆ.

Tags:

error: Content is protected !!