Belagavi

ಕಬ್ಬು ಕಟಾವಿನ ವೇಳೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ

Share

ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಐವರಿಂದ ಕುಡುಗೋಲಿನಿಂದ ಹಲ್ಲೆ ಮಾಡಿದ ಘಟನೆ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಐವರಿಂದ ಕುಡುಗೋಲಿನಿಂದ ಹಲ್ಲೆ ಮಾಡಿದ ಘಟನೆ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು‌ ಶುಕ್ರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಜಮೀ‌ನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಸಿದ್ದಪ್ಪ ಗೊಡೇರ್ (31) ಗೆ ಉದ್ದಪ್ಪ, ಲಕ್ಕಣ್ಣ, ಕೃಷ್ಣಾ ತಂಗಾಳಿ. ಫಕೀರಪ್ಪ ಎಂಬುವರು‌ ಏಕಾಏಕಿ ಜಮೀನಿಗೆ‌ ನುಗ್ಗಿ‌ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ‌ ಪರಿಣಾಮ ಜಮೀನನಲ್ಲಿಯೇ ಕುಸಿದು ಬಿದ್ದಿದ್ದಾರೆ. ಜಮೀನಿನಲ್ಲಿ ಸಿದ್ಧಪ್ಪನ ಜೊತೆಗೆ ಕೆಲಸ ಮಾಡುವವರು ಮನೆಯವರಿಗೆ ತಿಳಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಸಿದ್ದಪ್ಪನ ಪತ್ನಿ ವಾಣಿ ಶ್ರೀ ಮಾತನಾಡಿ, ಕಳೆದ ನಾಲ್ಕೈದು ದಿ‌ನದಿಂದ ಲಕ್ಕಣ್ಣ, ಕೃಷ್ಣಾ ನನ್ನ ಪತಿಗೆ ಜಮೀನು ಕೊಡುವಂತೆ ಬೇದರಿಕೆ ಹಾಕುತ್ತಿದ್ದ. ಕಬ್ಬು ಕಟಾವು ಮಾಡಿ ಕೊಡುವುದಾಗಿ ಹೇಳಿದ್ದರೂ ಕುಡುಗೋಲಿ‌ನಿಂದ ಹಲ್ಲೆ ಮಾಡಿದ್ದರೆ ಎಂದು‌ ಆರೋಪಿಸಿದರು.  ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಹಲವಾರು ಬಾರಿ ಹಲ್ಲೆಯನ್ನು ನಡೆಸಲಾಗಿತ್ತು. ಈ ಬಾರಿಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಕುಟುಂಬದವರು ತಿಳಿಸಿದರು.

ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!