ಇನ್ನು ಕಾಂಗ್ರೆಸ್ ಯುವಮುಖಂಡ ಮೃಣಾಲ್ ಹೆಬ್ಬಾಳ್ಕರ್ ಅವರು ಸ್ಥಳೀಯ ಮುಖಂಡರಾದ ಮಾಹಿತಿಯನ್ನು ಪಡೆದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆದೇಶದ ಮೇರೆಗೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಂದೋರಿನ ಆಸ್ಪತ್ರೆಯಲ್ಲಿರುವ ಮೃತರ ಪಾರ್ಥಿವ ಶರೀರಗಳನ್ನು ಬೆಳಗಾವಿಗೆ ತರಲು ವ್ಯವಸ್ಥೆಯನ್ನು ಮಾಡಲು ಸಚಿವರು ಆದೇಶವನ್ನು ನೀಡಿದ್ದಾರೆ. ಬೆಳಗಾವಿಯ ಜಿಲ್ಲಾಧಿಕಾರಿಗಳ ಮೂಲಕ ಇಂದೋರನ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು. ತಲಾ ಒಂದು ಮೃತದೇಹವನ್ನು ಬೆಳಗಾವಿಗೆ ತರಲು ಆಂಬ್ಯುಲೆನ್ಸ್ ವೆಚ್ಚ 95 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದ್ದು, ಲಕ್ಷ್ಮೀತಾಯಿ ಫೌಂಡೇಶನನ ವತಿಯಿಂದ ಸಹಾಯ ಮಾಡಲಾಗುವುದು ಎಂದರು.